ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್ ನಲ್ಲಿ ನೋಡಿದ್ದೇನೆ. ನಾನು ಯಾವ ಸಮುದಾಯವನ್ನು ಅವಹೇಳನ ಮಾಡಿಲ್ಲ ಎಂದಿದ್ದಾರೆ.
ತಾಲೂಕಿನ ಮೆರಗಲ್ ನಲ್ಲಿ ಬರಗಾಲ ಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ವೇಳೆ ಮಾತನಾಡಿದ ಅವರು, ನಾನು ಮುಲ್ಲಾ ಎಂದಿದ್ದೇನೆ. ಮುಲ್ಲಾಗಳು ಎಂದಿಲ್ಲ. ಸುಳ್ಳು ದೂರು ದಾಖಲಿಸಿ ಬಂಧಿಸಲು ಬಂದರೆ ಸಿದ್ಧನಿದ್ದೇನೆ. ನಾನು ಭಯೋತ್ಪಾದಕನಲ್ಲ. ಸಾರ್ವಜನಿಕ ಜೀವನದಲ್ಲಿರುವಾಗ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. ಎದೆ ಸೀಳಿದರೆ ನಾಲ್ಕು ಅಕ್ಷರವಿಲ್ಲ. ನೀಟ್ ಗೂ ಮುಲ್ಲಾಗೂ ಏನು ಸಂಬಂಧ ಎಂದು ಸಿ.ಟಿ ರವಿ ಹೇಳಿಕೆ ನೀಡಿದ್ದರು.



