ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಖಾತೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿರುವ ಸಚಿವ ಕೃಷ್ಣಬೈರೇಗೌಡ ಅವರು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ನನಗೆ ಯಾವುದೇ ಅಸಮಾಧಾನವಿಲ್ಲ. ಕಠಿಣ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ, ಜವಾಬ್ದಾರಿ ವಹಿಸಿಕೊಳ್ಳುವಾಗ ಸ್ಪಷ್ಟತೆ ಇದ್ದರೆ ನಿರೀಕ್ಷೆಯಷ್ಟು ಕೆಲಸ ಮಾಡಬಹುದು ಎಂದಿದ್ದಾರೆ.
ನಾನು ಏನೇ ಹೇಳಿದರೂ ಉತ್ತಮವಾಗಿರುತ್ತೆ. ಸ್ಪಷ್ಟತೆ ಇದ್ದರೆ ಫಲಿತಾಂಶ ಉತ್ತಮವಾಗಿ ಬರುತ್ತೆ. ಇಲ್ಲದಿದ್ದರೆ ನಿರೀಕ್ಷೆಯಷ್ಟು ಫಲಿತಾಂಶ ಬರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ ಎಂದರು. ಕೃಷ್ಣಬೈರೇಗೌಡ ಅವರ ಜೊಗೆಗೆ ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಎಸ್ ಬೋಸರಾಜ್ ಸಹ ಹೋಗಿದ್ದರು. ಶುಕ್ರವಾರ ರಾತ್ರಿ ವಾಪಸ್ ಆಗಿದ್ದಾರೆ. ಬಿಡಿಯ ಹಾಗೂ ಬಿಎಂಆರ್ ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ. ಹೀಗಾಗಿ ಇವರ ಅಸಮಾಧಾನಗೊಂಡಿದ್ದಾರೆ.



