LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಬರಗಾಲಪೀಡಿತ ಪಟ್ಟಿಗೆ ಸಿಂದಗಿ ಸೇರಿ 4 ತಾಲೂಕುಗಳು

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ರಾಜ್ಯ ಸರ್ಕಾರ ಬರಗಾಲಪೀಡಿತ ತಾಲೂಕುಗಳ ಮೂರನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.  53 ತಾಲೂಕುಗಳನ್ನು ಬರಗಾಲಪೀಡಿತವೆಂದು ಘೋಷಿಸಲಾಗಿದ್ದು, ಮಳೆಯ ಪ್ರಮಾಣದ ಮೇಲೆ ತೀವ್ರ, ಮಧ್ಯಮ ಎಂದು ಘೋಷಿಸಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ಹಾಗೂ ಮುದ್ದೇಬಿಹಾಳ ತಾಲೂಕುಗಳನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಸಿಂದಗಿ ತಾಲೂಕನ್ನು ತೀವ್ರ ಬರಪೀಡಿತವೆಂದು, ಆಲಮೇಲ, ದೇವರ ಹಿಪ್ಪರಿ, ಮುದ್ದೇಬಿಹಾಳ ತಾಲೂಕುಗಳನ್ನು ಮಧ್ಯಮ ಬರಪೀಡಿತವೆಂದು ಘೋಷಿಸಲಾಗಿದೆ. ಈ ಮೂಲಕ 13 ತಾಲೂಕುಗಳ ಪೈಕಿ 10 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇಂಡಿ, ಚಡಚಣ ಹಾಗೂ ತಾಳಿಕೋಟೆ ತಾಲೂಕುಗಳ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ನಿಗದಿತ ನಿಯಮಗಳ ಅನುಸಾರ ಘೋಷಣೆಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST