ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಹೋರಾಟ ಮುಂದುವರೆಸುವೆ. ಸೋಮವಾರ ಅಹೋರಾತ್ರಿ ಧರಣಿ ನಡೆಸಿದ್ದು, ಸದನವನ್ನು ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಲಾಗಿದೆ. ಇದರಿಂದಾಗಿ ಕಾಲಪ 2 ದಿನ ಮೊದಲೇ ತೆರೆ ಬೀಳುತ್ತಿದೆ.
ಆಗಸ್ಟ್ 13 ರಿಂದ ಶುರುವಾದ ಅಧಿವೇಶನ ಆಗಸ್ಟ್ 27 ರ ತನಕ ನಡೆಯಬೇಕಿತ್ತು. ಆದರೆ, ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವುದರಿಂದ ಬುಧವಾರ ಈದ್ ಮಿಲಾದ್ ರಜೆ ಇದೆ. ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿರುವುದಾಗಿ ಪ್ರಕಟಿಸಿವೆ. ಹೀಗಾಗಿ ಸಭಾಧ್ಯಕ್ಷರು, ಸಭಾಪತಿಗಳು, ಮುಖ್ಯಮಂತ್ರಿಗಳು ಸುದೀರ್ಘ ಸಭೆ ನಡೆಸಿದರು.



