ಪ್ರಜಾಸ್ತ್ರ ಸುದ್ದಿ
ಧರ್ಮಶಾಲಾ(Dharamshala): ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 13 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ 18 ಪಾಯಿಂಟ್ ಗಳೊಂದಿಗೆ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ. ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್ ಸಿಬಿ ಮೊದಲು ಬ್ಯಾಟ್ ಮಾಡಿತು. ವಿರಾಟ್ ಕೊಹ್ಲಿ 58, ವೆಂಕಟೇಶ್ ಅಯ್ಯರ್ 73 ರನ್ ಗಳಿಂದಾಗಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆ ಹಾಕಿ ಪಂಜಾಬ್ ಗೆ ಬೃಹತ್ ಗುರಿ ನೀಡಿತು.
ಪಂಜಾಬ್ ಪರ ಹರ್ಪಿತ್ ಬಾರ್ 2 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್, ಚಹಾಲ್ ತಲಾ 1 ವಿಕೆಟ್ ಪಡೆದರು. 223 ರನ್ ಗಳ ಗುರಿ ಬೆನ್ನು ಹತ್ತಿದ ಪಂಜಾಬ್ ಪಡೆ ಸಹ ಕೊನೆಯ ಓವರ್ ತನಕ ಹೋರಾಟ ನಡೆಸಿತು. ಶಶಾಂಕ್ ಸಿಂಗ್ 27 ಬೌಲ್ ಗಳಲ್ಲಿ 4 ಸಿಕ್ಸ್ ಹಾಗೂ 4 ಓವರ್ ಗಳೊಂದಿಗೆ 56 ರನ್ ಗಳಿಸಿದರು. ಕನೊಲಿ 37, ಸಿಡ್ಜ್ 35, ಸ್ಟೋನಿಸ್ 37 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಆರ್ ಸಿಬಿ 23 ರನ್ ಗಳಿಂದ ಗೆಲುವು ಸಾಧಿಸಿತು.



