ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಸಿದ್ದನಗೌಡ ಬ.ಪಾಟೀಲ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ಸರ್ವಸದಸ್ಯರ ಸಹಮತದೊಂದಿಗೆ 2026-28ನೇ ಸಾಲಿನ ಅವಧಿಗೆ ಪುನರ್ ಆಯ್ಕೆ ಮಾಡಲಾಗಿದೆ.
''ಹಿರಿಯ, ಸಹೋದರ, ಸಹೋದರಿ ನ್ಯಾಯವಾದಿಗಳು ನನ್ನನ್ನು ಹಾಗೂ ನನ್ನ ಜೊತೆ ಈ ಹಿಂದೆಯಿದ್ದ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ 2026-28ನೇ ಅವಧಿಗೆ ಆಯ್ಕೆ ಮಾಡಿದ್ದು ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಎಲ್ಲ ಹಿರಿಯರು ನಮ್ಮ ಕಮಿಟಿಯ ಮೇಲೆ ಇಟ್ಟಂತಹ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಸಂಘದ ಸರ್ವೋತ್ತಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನಮ್ಮ ಮೇಲೆ ಭರವಸೆಯಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಪ್ರತಿಯೊಬ್ಬರಿಗೂ ಧನ್ಯವಾದಗಳು''. – ಸಿದ್ದನಗೌಡ ಪಾಟೀಲ, ಅಧ್ಯಕ್ಷರು, ತಾಲೂಕು ವಕೀಲರ ಸಂಘ
ಎ.ಜಿ ಮಸರಕಲ್ ಉಪಾಧ್ಯಕ್ಷರಾಗಿ, ಸಿ.ಎಂ ಸೂರ್ಯವಂಶಿ ಪ್ರಧಾನ ಕಾರ್ಯದರ್ಶಿಯಾಗಿ, ಪಿ.ಎಂ ಬಡಗೇರ ಸಹ ಕಾರ್ಯದರ್ಶಿಯಾಗಿ, ಎ.ಎಸ್ ದಂಗಾಪೂರ ಖಜಾಂಚಿಯಾಗಿ, ಎಸ್.ಎಂ ಕಾಚೂರ ಅವರನ್ನು ಮಹಿಳಾ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ. ಸಲಹಾ ಸಮಿತಿ ಸದಸ್ಯರಾಗಿ ಆರ್.ಎಂ ಯಾಳಗಿ, ಎಸ್.ಎಸ್.ಬೊಮ್ಮನಜೋಗಿ, ಪಿ.ಸಿ.ಬಿರಾದಾರ, ಬಿ.ಎಸ್.ಚಾವರ, ಬಿ.ವೈ.ಧಾಳಿ ಅವರನ್ನು ಆಯ್ಕೆ ಮಾಡಲಾಗಿದೆ.




