ಪ್ರಜಾಸ್ತ್ರ ಸುದ್ದಿ
ರಾಯ್ ಬರೇಲಿ(Raebareli): ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಯ್ದ ಕೈಗಾರಿಕೋದ್ಯಮಿಗಳಿಗೆ ದೇಶದ ಹಿತಾಸಕ್ತಿ ಮಾರಾಟ ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಇವರು ದೇಶದ್ರೋಹಿಗಳು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನರೇಗಾವನ್ನು ದುರ್ಬಲಗೊಳಿಸಿದರು. ಜಾತಿ ಗಣತಿ ನಡೆಸಲಿಲ್ಲ. ರಸಗೊಬ್ಬರ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಅಂಬಾನಿ ಮತ್ತು ಅದಾನಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇಂಧನ ಬೆಲೆ ಏರಿಕೆ ಆಗುವುದಿಲ್ಲವೆಂದು ಚುನಾವಣೆ ವೇಳೆ ಹೇಳಲಾಗಿತ್ತು. ಅದು ಈಗ ಬದಲಾಗಿದೆ. ಸಂವಿಧಾನ, ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಆರ್ ಎಸ್ಎಸ್ ನವರು ನಿಮ್ಮ ಮನೆಗೆ ಬಂದು ಮಾತನಾಡಿಸುವಾಗ ಮೋದಿ, ಅಮಿತ್ ಶಾ ದೇಶದ್ರೋಹಿಗಳು ಎಂದು ಹೇಳಬೇಕು ಅಂತಾ ತೀವ್ರ ಕಿಡಿ ಕಾರಿದ್ದಾರೆ.



