ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಜೋಸೆಫ್ ವಿಜಯ್ ಹಾಗೂ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿಯನ್ನು ಆಗಸ್ಟ್ 7ಕ್ಕೆ ಚೆಂಗಲ್ಪಟ್ಟು ನ್ಯಾಯಾಲಯ ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ವಿಜಯ್ ವಿರುದ್ಧ ಪತ್ನಿ ಸಂಗೀತಾ ಗಂಭೀರ ಆರೋಪಗಳನ್ನು ಮಾಡಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು.
ಏಪ್ರಿಲ್ 20ರಂದು ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಆದರೆ, ಅಂದು ಇಬ್ಬರು ಸಹ ಹಾಜರು ಆಗಿರಲಿಲ್ಲ. ಹೀಗಾಗಿ ಕೋರ್ಟ್ ಜೂನ್ 15ಕ್ಕೆ ಮುಂದೂಡಿಕೆ ಮಾಡಿತ್ತು. ಖುದ್ದು ಹಾಜರಾಗುವಂತೆ ಸೂಚಿಸಿತ್ತು. ಈಗ ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಲಾಗಿದೆ.
ವಿಜಯ್ ವಿರುದ್ಧ ಪತ್ನಿ ವೈಯಕ್ತಿಕ ಸಂಬಂಧಗಳ ಬಗ್ಗೆ ಆರೋಪಿಸಿದ್ದಾರೆ. ನಟಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರ ಬಗ್ಗೆ 2021ರಲ್ಲಿ ತಿಳಿದಿದೆ. ಇದರಿಂದಾಗಿ ತಮಗೆ, ಇಬ್ಬರು ಮಕ್ಕಳಿಗೆ ಮುಖಭಂಗವಾಗಿದೆ. ತಮಗೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದಾರೆ. ತಮ್ಮ ಮುಕ್ತ ಓಡಾಟಕ್ಕೂ ತೊಂದರೆ ಮಾಡಿದ್ದಾರೆ. ಇದರಿಂದ ಮಾನಸಿಕ ಕಿರುಕುಳವಾಗಿದ್ದು, ವಿಚ್ಛೇದನ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. 1999ರಲ್ಲಿ ವಿಜಯ್ ಹಾಗೂ ಸಂಗೀತಾ ಮದುವೆಯಾಗಿದ್ದಾರೆ.



