ಆಲಮೇಲ
ಆಲಮೇಲ(Alamela): ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದಲ್ಲಿನ ಸರಕಾರಿ ಗಂಡು ಮಕ್ಕಳ ಮಾದರಿ ಪ್ರಾರ್ಥಮಿಕ ಶಾಲೆಯ ಶಿಕ್ಷಕ ಆಯುಬ್ ಅಬ್ದಲ್ಗನಿ ದುದನಿ ಅವರ ಬೀಳ್ಕೊಡುಗೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಶಾಸಕ ಅಶೋಕ ಮನಗೂಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಕ್ಷಕರಿಗೆ ಶುಭ ಕೋರಿದರು.
ಈ ವೇಳೆ ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬಡ್, ಟಿಪ್ಪು ಕ್ರಾಂತಿ ಸೇನೆಯ ರಾಜ್ಯಧ್ಯಕ್ಷ ದಸ್ತಗಿರ್ ಮುಲ್ಲಾಸೇರಿದಂತೆ ಇತರರು ಮಾತನಾಡಿದರು. ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಬಂದೇನವಾಜ ಗೋಗಿ ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಬಳಗಾನೂರು ಗ್ರಾಮಸ್ಥರು, ವಿದ್ಯಾರ್ಥಿಗಳು, ದುದನಿ ಕುಟುಂಬಸ್ಥರು ಭಾಗವಹಿಸಿದ್ದರು.



