ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಬಾಗೇವಾಡಿ ತಾಲೂಕಿನ ನಂದಿಹಾಳ ಗ್ರಾಮದಲ್ಲಿನ ಗ್ರಾಣದೇವತೆ ವೃತ್ತ ತೆರವುಗೊಳಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಗಾಣಿಗ ಸಮಾಜದ ಸಿಂದಗಿ ತಾಲೂಕಾ ಉಪಾಧ್ಯಕ್ಷ ಬಸವರಾಜ ಸಜ್ಜನ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿದ್ದು, ಗ್ರಾಣದೇವತೆ ವೃತ್ತವು ನಮ್ಮ ಸಮಾಜದ ಜನರ ಭಕ್ತಿ, ನಂಬಿಕೆ, ಸಂಸ್ಕೃತಿ ಹಾಗೂ ಭಾವನೆಗಳ ಪ್ರತೀಕವಾಗಿದೆ. ಅದನ್ನು ತೆರವುಗೊಳಿಸಿರುವ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ನಮ್ಮ ಸಮಾಜದ ಜನರ ಭಾವನೆಗಳಿಗೆ ಬೆಲೆ ನೀಡಿ ಈ ವೃತ್ತವನ್ನು ಪುನರ್‌ನಿರ್ಮಿಸಲು ಕ್ರಮ ಕೈಗೊಳ್ಳದಿದ್ದರೆ, ಗ್ರಾಮಸ್ಥರೊಂದಿಗೆ ಒಗ್ಗಟ್ಟಾಗಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು. ಈ ಹೋರಾಟಕ್ಕೆ ಉಂಟಾಗುವ ಯಾವುದೇ ಪರಿಸ್ಥಿತಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ. ಗ್ರಾಣದೇವತೆ ವೃತ್ತವನ್ನು ಪುನರ್‌ನಿರ್ಮಿಸಬೇಕು ಇದು ನಮ್ಮ ಹಕ್ಕೊತ್ತಾಯ ಎಂದು ತಿಳಿಸಿದ್ದಾರೆ.



