LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಿಯಕರನೊಂದಿಗೆ ಸೇರಿ ತಾಯಿಯನ್ನೇ ಕೊಂದ ಮಗಳು

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಪ್ರಿಯಕರನೊಂದಿಗೆ ಸೇರಿ ತಾಯಿಯನ್ನೇ ಮಗಳು ಕೊಂದಿರುವ(Murder) ಘಟನೆ ಸಿಲಿಕಾನ್ ಸಿಟಿಯ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ನಡೆದಿದೆ. ಜಯಲಕ್ಷ್ಮಿ(46) ಕೊಲೆಯಾದ ದುರ್ದೈವಿ. ಪವಿತ್ರಾ(29) ಹಾಗೂ ಲವಣೇಶ್ ಎನ್ನುವ ಈ ಇಬ್ಬರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರಿಗೆ ಆರೋಪಿ ಪವಿತ್ರಾ ಬುಧವಾರ ಘಟನೆ ನಡೆದ ದಿನ ದೂರು ನೀಡಿದ್ದಳು. ಮೃತ ಮಹಿಳೆಯ ಸಂಬಂಧಿಕರು, ಆರೋಪಿಯ ಹೇಳಿಕೆ ಪಡೆದು ಅಸಹಜ ಸಾವು ಎಂದು ಪೊಲೀಸರು ದಾಖಲಿಸಿಕೊಂಡಿದ್ದರು.

ಶುಕ್ರವಾರ ಮರಣೋತ್ತರ ವರದಿ ಬಂದಿದೆ. ಇದರಲ್ಲಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ಮಗಳನ್ನು ವಿಚಾರಣೆ ಮಾಡಿದಾಗ ಟವಲ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದಕ್ಕೆ ಸಾಥ್ ನೀಡಿದ ಪ್ರಿಯಕರ(Lover) ಲವಣೇಶನನ್ನು ಸಹ ಬಂಧಿಸಲಾಗಿದೆ. ಪವಿತ್ರಾಳನ್ನು 11 ವರ್ಷಗಳ ಹಿಂದೆ ಸುರೇಶ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿದೆ. 10 ವರ್ಷದ ಮಗಳು, 6 ವರ್ಷದ ಮಗನಿದ್ದಾನೆ. ಹೀಗಿರುವ ಲವಣೇಶ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ.

ಮಗಳ ಅಕ್ರಮ(Illegal Affair) ಸಂಬಂಧಕ್ಕೆ ತಾಯಿ ವಿರೋಧ ವ್ಯಕ್ತಪಡಿಸಿದ್ದಾಳೆ. ಹೀಗಿದ್ದರೂ ತಾಯಿಯಿಲ್ಲದ ಸಮಯದಲ್ಲಿ ಇವರಿಬ್ಬರು ಮನೆಯಲ್ಲಿ ಸೇರುತ್ತಿದ್ದರು. ಬುಧವಾರ ಇವರಿಬ್ಬರು ಸಿಕ್ಕಿಬಿದ್ದಿದ್ದಾರೆ. ಆಗ ಜಗಳವಾಗಿದೆ. ಕೊನೆಗೆ ಪ್ರಿಯಕರನೊಂದಿಗೆ ಸೇರಿ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಮಗಳನ್ನು ಸರಿ ದಾರಿಗೆ ತರಲು ಹೋದ ತಾಯಿ ಇಲ್ಲವಾಗಿದ್ದಾಳೆ. ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡು ಮಾಡಬಾರದ ಕೆಲಸ ಮಾಡಿ ಮಗಳು ಜೈಲು ಸೇರಿದ್ದಾಳೆ. ಆಕೆಯ ಮಕ್ಕಳಿಗ ತಬ್ಬಲಿಗಳಾಗಿವೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST