ಪ್ರಜಾಸ್ತ್ರ ಸುದ್ದಿ
ತಿರುವನಂತಪುರಂ(Thiruvananthapuram): ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಸಿಎಂ ಸ್ಪರ್ಧೆಯಲ್ಲಿದ್ದ ರಮೇಶ ಚೆನ್ನಿತ್ತಲ್ ಅವರು ಸೇರಿದಂತೆ ಕೆ.ಮುರುಳಿಧರನ್, ಸನ್ನಿ ಜೋಸೆಫ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಚಿವ ಸಂಪುಟದಲ್ಲಿ 20 ಸದಸ್ಯರಿದ್ದಾರೆ. ಇಬ್ಬರು ಪರಿಶಿಷ್ಟ ಸಮುದಾಯದವರು, ಇಬ್ಬರು ಮಹಿಳೆಯರು ಸೇರಿ 14 ಶಾಸಕರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.
140 ಸದಸ್ಯರ ಬಲವನ್ನು ಕೇರಳಂ ವಿಧಾನಸಭೆ ಹೊಂದಿದೆ. ಯುಡಿಎಫ್ ಮೈತ್ರಿಕೂಟ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಕಾಂಗ್ರೆಸ್ 63 ಶಾಸಕರಿದ್ದಾರೆ. ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ 22, ಕೇರಳ ಕಾಂಗ್ರೆಸ್ 8, ಆರ್ ಎಸ್ ಪಿ(ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ) 3 ಸ್ಥಾನಗಳಲ್ಲಿ ಗೆಲುವು ಪಡೆದಿವೆ.



