ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕೇರಳದ ನೂತನ ಮುಖ್ಯಮಂತ್ರಿ ಆಗಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಕಸರತ್ತುಗಳಿಗೆ ತೆರೆ ಬಿದ್ದಿದೆ. ಕೇರಳದ ಉಸ್ತುವಾರಿ ದೀಪಾ ದಾಸ್ ಮುನ್ಷಿ, ರಾಜ್ಯದ ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕನ್ ಹಾಗೂ ಮುಕುಲ್ ವಾಸ್ನಿಕ್ ಅವರು ಗುರುವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
ಸಿಎಂ ರೇಸಿನಲ್ಲಿ ವಿ.ಡಿ ಸತೀಶನ್, ಕೆ.ಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ್ ಅವರಿದ್ದರು. 140 ವಿಧಾನಸಭಾ ಸದಸ್ಯರನ್ನು ಹೊಂದಿರುವ ಕೇರಳದಲ್ಲಿ ಕಾಂಗ್ರೆಸ್ 63, ಮಿತ್ರ ಪಕ್ಷಗಳಾದ ಐಯುಎಂಎಲ್ 22, ಕೇರಳ ಕಾಂಗ್ರೆಸ್ 8, ಆರ್ ಎಸ್ಪಿ 3 ಸ್ಥಾನಗಳನ್ನು ಹೊಂದಿವೆ. ಪಕ್ಷದ ನಿರ್ಧಾರಕ್ಕೆ ಬಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.



