LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೈನಲ್ ಕದನ.. ಎಲ್ಲೆಲ್ಲೂ RCB ಜೈಕಾರ…

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಐಪಿಎಲ್-2025ರ ಫೈನಲ್ ಇಂದು ಸಂಜೆ ಗುಜರಾತಿನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಕದನ ನಡೆಯಲಿದೆ. ಕಳೆದ 18 ವರ್ಷಗಳಿಂದ ಮೂರು ಬಾರಿ ಫೈನಲ್ ಗೆ ಬಂದರೂ ಕಪ್ ಜಯಿಸದ ಆರ್ ಸಿಬಿಗೆ ಇದೀಗ ಮತ್ತೊಂದು ಸುವರ್ಣ ಅವಕಾಶ ಸಿಕ್ಕಿದೆ. ಹೀಗಾಗಿ ಅಭಿಮಾನಿಗಳ ಕೂಗು ಜೋರಾಗಿದೆ. ಎಲ್ಲಿ ನೋಡಿದರೂ ಆರ್ ಸಿಬಿ ಆರ್ ಸಿಬಿ ಎಂದು ಜೈಕಾರ ಹಾಕುತ್ತಿದ್ದಾರೆ.

ಕಳೆದ 18 ವರ್ಷಗಳಿಂದ ಒಂದೇ ಒಂದು ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರನೆಂದರೆ ಅದು ಕಿಂಗ್ ವಿರಾಟ್ ಕೊಹ್ಲಿ. ಅವರ ಜರ್ಸಿ ನಂಬರ್ ಸಹ 18 ಇದೆ. ಐಪಿಎಲ್ ಶುರುವಾಗಿ 18 ವರ್ಷಗಳಾಗಿವೆ. ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಹೇಳುತ್ತಲೇ ಬರುತ್ತಿದ್ದಾರೆ. ಅದು ನಿಜ ಮಾಡುವ ಅವಕಾಶ ಇಂದು ಇದ್ದು, ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಷ್ಟು ವರ್ಷಗಳ ಕಾಯುವಿಕೆಗೆ ಇಂದು ತೆರೆ ಬೀಳಬೇಕು ಅಂತಾ ಬೇಡಿಕೊಳ್ಳುತ್ತಿದ್ದಾರೆ.

ಫೈನಲ್ ಪಂದ್ಯದ ಬಗ್ಗೆ ಇಡೀ ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿರುವ ಕ್ರಿಕೆಟ್ ಅಭಿಮಾನಿಗಳಲ್ಲಿಯೂ ಕುತೂಹಲವಿದೆ. ಈ ಕಾರಣಕ್ಕೆ ಮಂಗಳವಾರ ಸಂಜೆ 7.30ಕ್ಕೆ ನಡೆಯುವ ಪಂದ್ಯವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ವಾತಾವರಣ ಸಹಕರಿಸಿದರೆ ಫ್ಯಾನ್ಸ್ ಗೆ ಹಬ್ಬ ಇರಲಿದೆ. ಯಾಕಂದರೆ, ಮಳೆಗಾಲ ವಾಡಿಕೆಗಿಂತ ಬೇಗ ಶುರುವಾಗಿದೆ. ನಾಕೌಟ್ ಪಂದ್ಯದಲ್ಲಿ ಮಳೆಯಿಂದ ತಡವಾಗಿ ಶುರುವಾಗಿದೆ. ಮಧ್ಯರಾತ್ರಿ ತನಕ ಪಂದ್ಯ ನಡೆದಿದೆ. ಹೀಗಾಗಿ ಇವತ್ತು ಒಂದು ದಿನ ಮಳೆರಾಯ ಬರದೆ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST