LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ವಿಜಯೇಂದ್ರಗೆ ಯೆಸ್ ಬಾಸ್ ಎನ್ನುವವರಿಗೆ ಹುದ್ದೆ'

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕಿಡಿ ಕಾರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಇದೀಗ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಸೇರ್ಪಡೆಯಾಗಿದ್ದಾರೆ. ಬುಧವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪಕ್ಷವೆಂದರೆ ನಾಲ್ಕು ಜನರು ಸೇರಿ ಕಟ್ಟಬೇಕು. ಆದರೆ, ವಿಜಯೇಂದ್ರಗೆ ಯೆಸ್ ಬಾಸ್ ಎನ್ನುವವರಿಗೆ ಹುದ್ದೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ನನ್ನ ರಾಜಕೀಯ ಪಣಕ್ಕಿಟ್ಟು ಬಿಜೆಪಿಗೆ ಬಂದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಮರಳುಗಾಡು ಎನ್ನುವ ಪರಿಸ್ಥಿತಿ ಇತ್ತು. ಇಲ್ಲಿ ಪಕ್ಷ ಕಟ್ಟಿದ್ದೇನೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣವಿಲ್ಲದ ವಿಜಯೇಂದ್ರ ಈಗಾಗ್ಲೇ ಮುಖ್ಯಮಂತ್ರಿಯಾಗಿದ್ದೀನಿ ಎನ್ನುವ ಅಹಂ, ದರ್ಪವಿದೆ. ನನ್ನ ಸೋಲಿಸಲು ಅವನ ಹಿಂಬಾಲಕರು ಪ್ರಯತ್ನಿಸಿದ್ದರು ಎಂದು ಏಕವಚನದಲ್ಲಿ ಆಕ್ರೋಶ ಹೊರ ಹಾಕಿದರು.

ನಾನು ಇದುವರೆಗೂ ಮಾಧ್ಯಮದ ಮುಂದೆ ಬಂದಿರಲಿಲ್ಲ. ಈಗ ಅನಿವಾರ್ಯವಾಗಿದೆ. ತಾಕತ್ತಿದ್ದರೆ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪಕ್ಷ ಕಟ್ಟಲಿ ಎಂದು ಸವಾಲು ಹಾಕಿದರು. ರಾಷ್ಟ್ರೀಯ ಅಧ್ಯಕ್ಷರಿಗೆ ನಿಮ್ಮನ್ನು ಸಂಪರ್ಕಿಸಬೇಕು ಎಂದರೆ ಸ್ಪಂದಿಸುತ್ತಾರೆ. ಇವರು ಫೋನ್ ಕೂಡ ಸ್ವೀಕರಿಸುವುದಿಲ್ಲ. ಇವರಿಗೆ ಹಿರಿಯ ನಾಯಕರು ಬೇಕಾಗಿಲ್ಲ. ಈ ಎಲ್ಲ ವಿಚಾರಗಳನ್ನು ಆರ್ ಎಸ್ಎಸ್ ಮುಖ್ಯಸ್ಥರಿಗೂ ತಿಳಿಸಿದ್ದೇನೆ ಅಂತಾ ಸಂಸದ ಡಾ.ಕೆ ಸುಧಾಕರ್ ಹೇಳಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST