LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾಲಿವುಡ್ ಹೀರೋಗೆ ಎ.ಹರ್ಷ ಆಕ್ಷನ್ ಕಟ್

ಪ್ರಜಾಸ್ತ್ರ ಸುದ್ದಿ

ಸ್ಯಾಂಡಲ್ ವುಡ್ ಅಂಗಳದ ನಿರ್ದೇಶಕ ಎ.ಹರ್ಷ( A.Harsha) ಒಂದರ ಮೇಲೆ ಒಂದು ಹಿಟ್ ಸಿನಿಮಾಗಳನ್ನು ನೀಡಿದವರು. ಕೋರಿಯೋಗ್ರಾಫರ್ ಆಗಿ ಸಿನಿ ಬದುಕು ಶುರು ಮಾಡಿದವರು ನಟನೆ ಮಾಡಿದರು. ಇದರ ಜೊತೆಗೆ ನಿರ್ದೇಶನಕ್ಕೂ ಇಳಿದು ಸಕ್ಸಸ್ ಆದರು. ಶಿವಣ್ಣನೊಂದಿಗೆ ಭಜರಂಗಿ ಎನ್ನುವ ಮಾಸ್ ಸಿನಿಮಾ ನೀಡಿ ಮೋಡಿ ಮಾಡಿದರು. ವಾಯುಪುತ್ರ, ಭಜರಂಗಿ-2 ಹಾಗೂ ವೇದ ಸಿನಿಮಾಗಳನ್ನು ಶಿವಣ್ಣನ ಜೊತೆಗೆ ಮಾಡಿ ಸಕ್ಸಸ್ ಮೇಲೆ ಸಕ್ಸಸ್ ನೀಡಿದರು.

ಕನ್ನಡದ ಬಳಿಕ ತೆಲುಗಿನಲ್ಲಿ ನಟ ಗೋಪಿಚಂದ್ ನಟನೆಯ ಭೀಮ ಸಿನಿಮಾ ಮಾಡಿದರು. ಈಗ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ನಟ ಟೈಗರ್ ಶ್ರಾಫ್(Tiger Shroff) ನಟನೆಯ ಭಾಗಿ-4 ಸಿನಿಮಾಗೆ ಎ.ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನು ತಮ್ಮ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 5, 2025ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಸಬೀರ್ ಖಾನ್ 2016ರಲ್ಲಿ ಭಾಗಿ-1 ಸಿನಿಮಾ ಮಾಡಿದರು. ಮುಂದೆ 2018ರಲ್ಲಿ ಭಾಗಿ-2, 2020ರಲ್ಲಿ ಭಾಗಿ-3 ಸಿನ್ಮಾ ಬಂದವು. ಈಗ ಭಾಗಿ-4 ಬರಲು ಸಜ್ಜಾಗುತ್ತಿದೆ.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST