LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ದರ್ಶನಗೆ ಕೋರ್ಟ್ ನಿಂದ ಸ್ವಲ್ಪ ನಿರಾಳ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜೈಲು ಸೇರಿ ಈಗಾಗ್ಲೇ ಒಂದು ವರ್ಷ ಕಳೆಯುತ್ತಿದೆ. ಹೀಗಾಗಿ ದರ್ಶನ್ ಯಾವಾಗ ಹೊರಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಗೆ ಅಗತ್ಯ ಬಿದ್ದರೆ ಹೊರಗಡೆ ಚಿಕಿತ್ಸೆ ಪಡೆಯಲು ಕೋರ್ಟ್ ಸಮ್ಮತಿ ನೀಡಿದೆ.

ಕಳೆದ 12 ವರ್ಷಗಳಿಂದ ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವರದಿಯಲ್ಲಿ ಬೆನ್ನುಮೂಳೆ ನಡುವಿನ ಡಿಸ್ಕ್ ಜಾರಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎಪಿಡ್ಯೂರಲ್ ಇಂಜಕ್ಷನ್ ಪಡೆಯುತ್ತಿದ್ದರು. ಜೈಲಿಗೆ ಹೋದ ಬಳಿಕ ಇಂಜಕ್ಷನ್ ಪಡೆಯುತ್ತಿಲ್ಲ. ಇದರಿಂದಾಗಿ ಸಮಸ್ಯೆ ಹೆಚ್ಚಾಗಿದೆ. ಫಿಸಿಯೋಥೆರಪಿ ಸಹ ಸರಿಯಾಗಿ ನೀಡಿಲ್ಲ. ಹೀಗಾಗಿ ಅನುಭವಿ ಫಿಸಿಯೋಥೆರಪಿಸ್ಟ್ ಅಗತ್ಯವಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೇಕಾದ ಯಂತ್ರೋಪಕರಣಗಳಿವೆ. ಅಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೊಡಬೇಕು ಎಂದು ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ನ್ಯಾಯಾಲಯದಲ್ಲಿ ಮನವಿ ಮಾಡಿದರು.

ಕೋರ್ಟ್ ಇದೀಗ ಚಿಕಿತ್ಸೆ ಪಡೆಯಲು ಅನುಮತಿ ನೀಡಿದೆ. ಈ ಆದೇಶವನ್ನು ಜೈಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ತಕ್ಷಣ ತಲುಪಿಸಿ ಎಂದು ಹೇಳಿದೆ. ಇನ್ನು ಇದಕ್ಕೆ ಆಕ್ಷೇಪಣೆಗೆ ಪ್ರಾಸಿಕ್ಯೂಷನ್ ಕಾಲಾವಕಾಶ ಕೇಳಿದ್ದಾರೆ. ಎಸ್ ಪಿಪಿ ಅವರ ಮನೆಯಲ್ಲಿ ಕಾರ್ಯಕ್ರಮ ಇರುವುದರಿಂದ ರಜೆಯಲ್ಲಿದ್ದಾರೆ ಎಂದು ಎಎಸ್ ಪಿಪಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಕ್ಕೆ ಹೇಳಿದರು. ವೈದ್ಯಕೀಯ ವರದಿ ಪಡೆದ ಬಳಿಕ ಶನಿವಾರ ಅಥವ ಸೋಮವಾರ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ಹೇಳಿದರು. ಹೀಗಾಗಿ ನಟ ದರ್ಶನ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಾ ಕಾದು ನೋಡಬೇಕು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST