LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟಿ ರನ್ಯಾಗೆ ಹಿಂದಿನ ಸರ್ಕಾರದಲ್ಲಿ 12 ಎಕರೆ ಜಮೀನು ಮಂಜೂರು!

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಚಿನ್ನ ಕಳ್ಳ ಸಾಕಾಣಿಕೆ(Gold Smuggling) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಗೆ ಹಿಂದಿನ ಸರ್ಕಾರದಲ್ಲಿ 12 ಎಕರೆ ಜಮೀನು ಮಂಜೂರು ಆಗಿರುವುದು ಬೆಳಕಿಗೆ ಬಂದಿದೆ. 137ನೇ ರಾಜ್ಯ ಮಟ್ಟದ ಏಕ ವಿಂಡೋ ಕ್ಲಿಯರೆನ್ಸ್ ಸಮಿತಿ, ನಟಿಗೆ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ತುಮಕೂರು ಜಿಲ್ಲೆ ಸಿರಾ ಕೈಗಾರಿಕಾ ಪ್ರದೇಶದಲ್ಲಿನ ಭೂಮಿಯನ್ನು ಅನುಮೋದಿಸಲಾಗಿದೆಯಂತೆ.

ಕಂಪನಿಯು 138 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಉಕ್ಕಿನ ಟಿಎಂಟಿ ರಾಡ್ ಗಳು, ಬಾರ್ ಗಳು ಹಾಗೂ ಇದಕ್ಕೆ ಸಂಬಂಧಿಸಿದಂತೆ ಉತ್ಪನ್ನಗಳನ್ನು ತಯಾರಿಸುವ  ಘಟಕ ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಿತ್ತು. ನಟಿಗೆ ಪ್ರಭಾವಿ ರಾಜಕೀಯ ನಾಯಕರ ನಂಟಿದ್ದು, ಇದರಿಂದಲೇ 12 ಎಕರೆ ಭೂಮಿ ಮಂಜೂರು ಆಗಿದೆ ಎಂದು ಹೇಳಲಾಗುತ್ತಿದೆ. ಈಗ ಸರ್ಕಾರದ ಪ್ರಭಾವಿ ರಾಜಕಾರಣಿಯ ಹೆಸರು ಕೇಳಿ ಬರುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST