ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸರ್ಕಾರ ಕಾನೂನು ಚೌಕಟ್ಟಿನಲ್ಲಿ ತಳವಾರ ಸಮಾಜಕ್ಕೆ 20 ಗುಂಟೆ ಜಾಗವನ್ನು ಗೋಲಗೇರಿ ರಸ್ತೆಯ ಹತ್ತಿರ ನೀಡಲಾಗಿದೆ. ಯಾರೋ ಹೇಳಿದ್ದರಿಂದ ಸಂಗಮೇಶ ಡಿಗ್ಗಿ ಅನ್ನೋ ಯುವಕ ಈ ರೀತಿ ಮಾಡಿದ್ದಾನೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗುತ್ತದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಹಣಮಂತ ಸುಣಗಾರ ಹೇಳಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷವಾದರೂ ನಮಗೆ ನ್ಯಾಯ ಸಿಕ್ಕಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಭೂಮಿಪೂಜೆ ವೇಳೆ ಶಾಸಕ ಅಶೋಕ ಮನಗೂಳಿ, ಪರಿಷತ್ ಸದಸ್ಯ ಕಮಕನೂರ, ಮಾಜಿ ಶಾಸಕ ಶರಣಪ್ಪ ಸುಣಗಾರ ಸೇರಿ ಸಮುದಾಯದವರೆಲ್ಲ ಇದ್ದರು. ಕಾನೂನು ಅಡಿಯಲ್ಲಿ ಕೆಲಸ ನಡೆದಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಬಸವರಾಜ ಯರನಾಳ ಮಾತನಾಡಿ, ನಮ್ಮ ಸಮಾಜದವರು ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ಮಾಡಬೇಕಾದರೆ ನಿರ್ಧಿಷ್ಟವಾದ ಜಾಗ ಇರಲಿಲ್ಲ. ಇದನ್ನು ಮನಗಂಡು ಶಾಸಕ ಅಶೋಕ ಮನಗೂಳಿಯವರು ಉತ್ತಮವಾದ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಸರ್ಕಾರದಿಂದ ನಿರ್ಧಿಷ್ಟವಾದ 20 ಗುಂಟೆ ಜಾಗವನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ. ಇದನ್ನು ಸಹಿಸಿಕೊಳ್ಳಲಾರದೆ ಕೆಲವರ ಪ್ರಚೋದನೆಯಿಂದ ಸಂಗಮೇಶ ಡಿಗ್ಗಿ ಎಂಬುವರು ವಿವಾದಿತ ಜಮೀನು ಎಂದಿದ್ದಾರೆ. ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಆತನ ನಡೆಯನ್ನು ಖಂಡಿಸುತ್ತೇವೆ ಎಂದರು.
ಈ ವೇಳೆ ಅನಿಲ ಕಡಕೋಳ, ಭೀಮು ರೋಡಗಿ, ಗೊಲ್ಲಾಳಪ್ಪ ಬಂಕಲಗಿ, ನಾಗು ತಳವಾರ, ಸಿದ್ದನಗೌಡ ಬಿರಾದಾರ, ಸಿದ್ದು ರೋಡಗಿ, ದತ್ತು ನಾಯ್ಕೋಡಿ, ಶ್ರೀಶೈಲ ಬುಯ್ಯಾರ, ಕುಮಾರ ಬೋರಗಿ, ಮಲ್ಲು ಸುಣಗಾರ, ಸಿದ್ದು ಚಂದನವರ, ಶರಣು ಹಂಚನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



