LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುವತಿಗೆ ಅಸಭ್ಯವಾಗಿ ನಿಂದಿಸಿದ ಆಟೋ ಚಾಲಕನ ಬಂಧನ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆಟೋ ಚಾಲಕನೊಬ್ಬ ಯುವತಿಗೆ ಅತ್ಯಂತ ಕೆಟ್ಟ ಪದ ಬಳಕೆ ಮಾಡಿ ನಿಂದಿಸುತ್ತಾನೆ. ಆದರೆ, ಆಕೆ ಮಾತ್ರ ತಾಳ್ಮೆಯಿಂದ ಮಾತನಾಡುತ್ತಲೇ ವಿಡಿಯೋ ರೆಕಾರ್ಡ್ ಮಾಡಿಕೊಳ್ಳತ್ತಾಳೆ. ಈ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಯುವತಿಗೆ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಸಂತೋಷ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಿಳೇಕಹಳ್ಳಿ ಮೂಲದ ಆಟೋ ಚಾಲಕ ಕಳೆದ ಸೆಪ್ಟೆಂಬರ್ 24ರಂದು ಯುವತಿಗೆ ಅತ್ಯಂತ ಕೆಟ್ಟದಾಗಿ ಬೈದಿರುವ ಘಟನೆ ನಡೆದಿದೆ.

ಮುಂಜಾನೆ 5.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಗೆ ಬಂದಿದ್ದ ಯುವತಿಗೆ ಬಿಟಿಎಂ ಲೇಔಟ್ ಗೆ ಹೋಗಲು ಯಾವುದೇ ಕ್ಯಾಬ್ ಸಿಕ್ಕಿರಲಿಲ್ಲ. ಆಟೋ ಹತ್ತಿಕೊಂಡು ಹೋಗಿದ್ದಾಳೆ. ಹೋಗುವಾಗ 300 ರೂಪಾಯಿ ಕೊಡುವುದಾಗಿ ಹೇಳಿದ್ದಾಳಂತೆ. ಬನ್ನೇರುಘಟ್ಟ ಮಾರ್ಗವಾಗಿ ಬಿಟಿಎಂ ಲೇಔಟ್ ಗೆ ಬಂದಾಗ ಮೀಟರ್ 340 ರೂಪಾಯಿ ತೋರಿಸಿದೆ. ಇದನ್ನು ಯುವತಿ ಪ್ರಶ್ನಿಸಿದ್ದಾಳೆ. ಇಷ್ಟಕ್ಕೆ ಆತ ಬಾಯಿಗೆ ಬಂದಂತೆ ಅತ್ಯಂತ ಕೆಟ್ಟ ಪದಗಳನ್ನು ಬಳಿಸಿ ಬೈದಿದ್ದಾನೆ. ಯುವತಿಯ ಸ್ನೇಹಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಪೊಲೀಸರು ಆಟೋಲ ಚಾಲಕ ಸಂತೋಷ್ ಕುಮಾರನನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST