ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಹಳೆಯ ಫ್ರಿಜ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಚವಾಟ ಗಲ್ಲಿಯಲ್ಲಿ ಇಂತಹದೊಂದು ದುರಂತ ನಡೆದಿದೆ. ನಾಲ್ವರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ.
ಶಾರದಾ ಗಜಾನನ ದಾಮೋನೆ(45), ಪ್ರಿಯಾ(28), ಗಂಗಾ(25), ಅತ್ತೆ ಭಾರತಿ(50) ಮೃತ ದುರ್ದೈವಿಗಳು. ಗಜಾನನ ರಾಜರಾಮ ದಾಮೋನೆ(65) ಹಾಗೂ ಮಗ ರೋಷನ್(21) ಗಂಭೀರವಾಗಿ ಗಾಯಗೊಂಡಿದ್ದಾರೆ. ಶೇಕಡ 90ರಷ್ಟು ಸುಟ್ಟಗಾಯಗಳಾಗಿವೆ ಎಂದು ಆಸ್ಪತ್ರೆಯ ಮೂಲದಿಂದ ಹೇಳಲಾಗುತ್ತಿದೆ.
ತಗಡು ಹಾಗೂ ಕಟ್ಟಿಗೆಯಿಂದ ಇರುವ ಸಣ್ಣ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಹಳೆಯ ಫ್ರಿಜ್ ಖರೀದಿ ಮಾಡಿದ್ದರಂತೆ. ಬೆಂಕಿಯ ತೀವ್ರತೆಯಿಂದ ನೆರೆ ಹೊರೆಯುವ ರಕ್ಷಿಸಲು ಸಾಧ್ಯವಾಗಿಲ್ಲವಂತೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಮನೆ ಸುಟ್ಟು ಭಸ್ಮವಾಗಿದೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.


