LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಧುಗಿರಿ: ಮಹಿಳೆಯ ಮೇಲೆ ಕರಡಿ ದಾಳಿ, ತೀವ್ರ ಗಾಯ

ಪ್ರಜಾಸ್ತ್ರ ಸುದ್ದಿ (ಸಾಂದರ್ಭಿಕ ಚಿತ್ರ)

ತುಮಕೂರು(Tumakoru): ಮೇಕೆಗಳನ್ನು ಮೇಯಿಸಲು ಹೊಲಕ್ಕೆ ಹೋಗಿದ್ದಾಗ ಮಹಿಳೆಯ ಮೇಲೆ ಶುಕ್ರವಾರ ಮಧ್ಯಾಹ್ನ ಕರಡಿಯೊಂದು ದಾಳಿ(Bear Attack) ಮಾಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಹೋಬಳಿಯಲ್ಲಿ ನಡೆದಿದೆ. ಭಾಗ್ಯಮ್ಮ ಎನ್ನುವ ಮಹಿಳೆ ತಲೆಗೆ ಗಂಭೀರ ಗಾಯಗಳಾಗಿವೆ. ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದರು. ಏಕಾಏಕಿ ಮೂರು ಕರಡಿಗಳು ಕಾಣಿಸಿಕೊಂಡಿವೆ. ಒಂದು ಕರಡಿ ಮಹಿಳೆ ಭಾಗ್ಯಮ್ಮ ಮೇಲೆ ದಾಳಿ ಮಾಡಿದೆ. ಅವರು ಕಿರುಚಾಡುವುದುನ್ನು ಕೇಳಿ ಅಲ್ಲಿಯೇ ಇದ್ದ ಪತಿ ನಾಗರಾಜು ಹಾಗೂ ಇತರೆ ಹೊಲದಲ್ಲಿನ ಜನವರು ಓಡಿ ಬಂದು ಕರಡಿಯನ್ನು ಓಡಿಸಿದ್ದಾರೆ. ತಲೆಗೆ ಗಂಭೀರ ಗಾಯಾಗಿವೆ. ಮೈ ಕೈಗೆ ಒಂದಿಷ್ಟು ಗಾಯಗಳಾಗಿವೆ. ರೇಂಜ್ ಫಾರೆಸ್ಟ್ ಅಧಿಕಾರಿ ಬಂದು ಆಂಬ್ಯುಲೆನ್ಸ್ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST