ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ರಾಂಪುರ ಗ್ರಾಮದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬ ಮತ್ತು ಹಜರತ್ ಟಿಪ್ಪು ಸುಲ್ತಾನ್ ರವರ ಕೃತ ಉದ್ಘಾಟನೆ ಅತಿ ವಿಜೃಂಭಣೆಯಿಂದ ನಡೆಯಿತು. ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಅಧ್ಯಕ್ಷರಾದ ದಸ್ತಗಿರ್ ಮುಲ್ಲಾ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ವೈ.ಸಿ.ಮಯೂರ, ಗ್ರಾಮದ ಮುಖಂಡರಾದ ಇಬ್ರಾಹಿಂ ಸಾಬ್ ಗೋಗಿ ಹಾಗೂ ವಸೀಂ ಗೋಗಿ, ಅಮೀರ್ ಅಹ್ಮದ್ ಮುಜಾವರ್, ಎಂ.ಎಚ್.ಮಲವಾಡ, ಮೈನುದ್ದೀನ ಯಾಳಗಿ, ಅನಿಲ ದೊಡ್ಡಮನಿ, ಆನಂದ ಪರಿಟ್, ಈರಣ್ಣ ರುಕಂಪುರ, ಉಮೇಶ ಯಾತನೂರ, ಬಂದೇನವಾಜ ಗೋಗಿ, ರಫಿ ಪಠಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



