LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವೆ ಹೆಬ್ಬಾಳ್ಕರ್ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು: ಛಲವಾದಿ ನಾರಾಯಣಸ್ವಾಮಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಂಕ್ರಮಣದ ಹಬ್ಬದ ಸಂದರ್ಭದಲ್ಲಿಯೇ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರಿನಲ್ಲಿ ದೊಡ್ಡ ಮೊತ್ತದ ಹಣ ಸಾಗಿಸುತ್ತಿದ್ದರು. ಹೀಗಾಗಿ ಅವರು ಎಸ್ಕಾರ್ಟ್, ಗನ್ ಮ್ಯಾನ್ ಎಲ್ಲ ಬಿಟ್ಟು ಹೋಗಿದ್ಯಾಕೆ? ಸತ್ಯವನ್ನು ಜನರಿಗೆ ತಿಳಿಸಿ ಎಂದು ಹೇಳುವ ಮೂಲಕ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಮೊದಲು ನಾಯಿ ತಪ್ಪಿಸಲು ಅಪಘಾತ ಅಂದರು. ನಂತರ ಹಿಟ್ ಅಂಡ್ ರನ್ ಆಯಿತು. ಡ್ರೈವರ್ ನಿದ್ದೆಗೆ ಜಾರಿದ್ರು ಅನ್ನೋದು ಸತ್ಯನಾ? ಒಬ್ಬರೆ ಪ್ರಯಾಣ ಮಾಡಿದ್ದರ ಗುಟ್ಟೇನು? ಸಚಿವರು ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಅಪಘಾತದ ದೂರು ದಾಖಲಿಸುವ ಮೊದಲು ಕಾರನ್ನು ಬೇರೆ ಕಡೆ ಸಾಗಿಸಿದ್ದು ಯಾಕೆ ಎಂದು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಕಾರಿನಲ್ಲಿ ಎಷ್ಟು ಬ್ಯಾಗ್ ಇದ್ದವು ಅನ್ನೋದರ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST