LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು: ಕೇಕ್ ತಿಂದ ಮಗು ಸಾವು, ಹೆತ್ತವರ ಸ್ಥಿತಿ ಗಂಭೀರ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೇಕ್(Cakes) ತಿಂದ ಪರಿಣಾಮ ಐದು ವರ್ಷದ ಮಗು ಮೃತಪಟ್ಟ ಹಾಗೂ ಹೆತ್ತವರು ಸ್ಥಿತಿ ಗಂಭೀರವಾಗಿರುವ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬಾಲರಾಜ್ ಎಂಬುವರ ಮಗ ಧೀರಜ್(05) ಮೃತ ಬಾಲಕ ಎಂದು ತಿಳಿದು ಬಂದಿದೆ. ಕೇಕ್ ತಿಂದ ತಂದೆ, ತಾಯಿ ಪರಿಸ್ಥಿತಿ ಸಹ ಗಂಭೀರವಾಗಿದೆ. ಭುವನೇಶ್ವರಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ತೀವ್ರ ಅಸ್ವಸ್ಥಗೊಂಡಿರುವ ಬಾಲರಾಜ್ ಹಾಗೂ ಪತ್ನಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಮ್ಸ್(KIMS Hospital) ಆಸ್ಪತ್ರೆ ನಿರ್ದೇಶಕ ಡಾ.ಅಂಜಿನಪ್ಪ ಮಾತನಾಡಿದ್ದು, ಫುಡ್ ಪಾಯ್ಸಿನ್ ನಿಂದ ಮಗು ಮೃತಪಟ್ಟಿದೆ. ಈ ಬಗ್ಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಲಾಗಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವರದಿ ನೋಡಿದ ನಂತರ ಹೇಳುತ್ತೇವೆ ಎಂದಿದ್ದಾರೆ. ಕೆ.ಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೇಕ್ ಗಳಲ್ಲಿ ಬಳಸುವ ಬಣ್ಣದಿಂದ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳಿವೆ ಎಂದು ಇತ್ತೀಚೆಗೆ ತಿಳಿದು ಬಂದಿದೆ. ಇದರ ನಡುವೆ ದುರಂತವೊಂದು ನಡೆದಿದ್ದು, ಇದರ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST