LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಜು ಶತಕದ ಅಬ್ಬರ.. ಗೆಲುವಿನ ಖಾತೆ ತೆರೆದ ಸಿಎಸ್ಕೆ

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): 2026ನೇ ಸಾಲಿನ ಐಪಿಎಲ್ ಟೂರ್ನಿಯ 18ನೇ ಪಂದ್ಯ ಶನಿವಾರ ಸಂಜೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಿದೆ. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅವರ ಪ್ಲಾನ್ ಅನ್ನು ಸಿಎಸ್ಕೆ ತಂಡದ ಸಂಜು ಸ್ಯಾಮ್ಸನ್ ಉಲ್ಟಾ ಮಾಡಿದರು. ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು.

ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಹಿಂದಿನ ಪಂದ್ಯಗಳಲ್ಲಿ ವಿಫಲರಾಗಿದ್ದರು. ಆದರೆ, ಶನಿವಾರದ ಪಂದ್ಯದಲ್ಲಿ ಅಭಿಮಾನಿಗಳನ್ನು ರಂಜಿಸಿದರು. 4 ಸಿಕ್ಸ್ ಹಾಗೂ 15 ಓವರ್ ಗಳೊಂದಿಗೆ 56 ಬೌಲ್ ಗಳಲ್ಲಿ ಅಜೇಯ 115 ರನ್ ಗಳಿಸಿದರು. ಯುವ ಆಟಗಾರ ಆಯುಷ್ 59 ರನ್ ಗಳಿಸಿ ರಿಟೈಡ್ ಔಟ್ ಆದರು. ನಾಯಕ ಋತುರಾಜ್ ಗಾಯಕ್ವಾಡ್ 15 ರನ್ ಗೆ ಔಟ್ ಆದರು. ಶಿವಂ ದುಬೆ ಅಜೇಯ 20 ರನ್ ಗಳಿಸಿದರು. ಡೆಲ್ಲಿ ಪರ ನಾಯಕ ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

213 ರನ್ ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು. ಪ್ಯಾಥಂ 41 ಹಾಗೂ ಸ್ಟಬ್ಸ್ 60 ರನ್ ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಕೆ.ಎಲ್ ರಾಹುಲ್ 18, ಸಮೀರ 6, ನಾಯಕ ಅಕ್ಷರ್ 1, ಡೇವಿಡ್ ಮಿಲ್ಲರ್ 17, ಅಶುತೋಷ್ ಶರ್ಮಾ 19, ನಬಿ 4, ಕುಲ್ದೀಪ್ ಯಾದವ್ 4, ನಿಗಡಿ 3 ರನ್ ಗಳಿಸಿ ಔಟ್ ಆದರು. ಸಿಎಸ್ಕೆ ಪರ ಓವರ್ ಟನ್ 4, ಅನ್ಶುಲ್ 3 ವಿಕೆಟ್ ಪಡೆದು ಮಿಂಚಿದರು. ಕಲೀಲ್ ಅಹ್ಮದ್, ಗುರ್ಜ್ ಪನೀತ್ ಸಿಂಗ್, ನೂರ್ ಹಮೀದ್ ತಲಾ 1 ವಿಕೆಟ್ ಪಡೆದರು. ಸತತ 3 ಪಂದ್ಯಗಳಲ್ಲಿ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಸಿಎಸ್ಕೆ ಗೆಲುವಿನ ಖಾತೆ ತೆರೆಯಿತು. ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST