LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದರ್ಶನ್ ಪ್ರಕರಣ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ: ಬಿ.ದಯಾನಂದ್

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ(Murder) ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ(D Boss) ದರ್ಶನ್, ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 19 ಆರೋಪಿಗಳ ಚಾರ್ಜ್ ಶೀಟ್ ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್( police commissioner) ಆಯುಕ್ತ ಬಿ.ದಯಾನಂದ್ ಅವರು ತಿಳಿಸಿದ್ದಾರೆ. ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ತನಿಖೆ ಕೊನೆಯ ಹಂತಕ್ಕೆ ಬಂದಿದೆ. ಹೈದ್ರಾಬಾದ್ ನಿಂದ ಎಫ್ಎಸ್ಎಲ್ ವರದಿ ಇಂದು ಅಥವ ನಾಳೆ ಬರಲಿದೆ ಎಂದರು.

ಈಗಾಗ್ಲೇ ಬೆಂಗಳೂರಿನ ವಿಧಿ ವಿಜ್ಞಾನ(FSL Report) ಪ್ರಯೋಗಾಲಯದ ಎಲ್ಲ ವರದಿಗಳು ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿವೆ. ಹೈದ್ರಾಬಾದ್ ನಿಂದ ಬರುವುದು ಬಾಕಿ ಉಳಿದಿದೆ. ಇಂದು ಸಂಜೆ ಅಥವ ನಾಳೆ ಅದು ಬರಲಿದೆ ಅಂತಾ ಹೇಳಿದರು. ಜೂನ್ 8ರಂದು ಕೃತ್ಯ ನಡೆದಿದೆ. ಮರುದಿನ ಬೆಳಕಿಗೆ ಬಂದಿದೆ. ಅದಾದ ಬಳಿಕ ನಟ(Darshan) ದರ್ಶನ್, ಆಪ್ತ ಗೆಳತಿ ಪವಿತ್ರಾಗೌಡ ಸೇರಿ ಇತರರ ಬಂಧನವಾಗಿದೆ. ಕಳೆದ ಎರಡು ತಿಂಗಳಿನಿಂದ ನಟ ದರ್ಶನ್ ಸೇರಿ 19 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST