LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತರುಣ್, ಸೋನಲ್ ಮದುವೆ.. ಕಡೆಗೂ ಬರದ ದರ್ಶನ್

ಪ್ರಜಾಸ್ತ್ರ ಸುದ್ದಿ

ಸ್ಯಾಂಡಲ್ ವುಡ್ ಅಂಗಳದ ಯುವ ನಿರ್ದೇಶಕ ತರುಣ್(tharun sudhir) ಸುಧೀರ್ ಹಾಗೂ ನಟಿ ಸೋನಲ್(sonal monteiro) ಮಂಥೆರೋ ಮದುವೆ ಭಾನುವಾರ ತುಂಬಾ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಕನ್ನಡ ಚಿತ್ರರಂಗದವರೆಲ್ಲ ಭಾಗಿಯಾಗಿದ್ದರು. ತರುಣ್ ಅನುಗಾಲದ ಸ್ನೇಹಿತರಾದ ಶರಣ್, ಪ್ರೇಮ್ ಸೇರಿ ಇತರರು ಅರಿಶಿಣ ಶಾಸ್ತ್ರದಿಂದ ಹಿಡಿದು ಪ್ರತಿಯೊಂದರಲ್ಲಿ ಭಾಗವಹಿಸಿದ್ದರು. ಹಿರಿಯ ಖಳನಟರಾಗಿದ್ದ ಸುಧೀರ್ ಅವರ ಎರಡನೇ ಪುತ್ರನ ಮದುವೆ ಭರ್ಜರಿಯಾಗಿ ನಡೆಯಿತು. ತಾಯಿ ಮಾಲತಿ ಸುಧೀರ್, ಅಣ್ಣ, ನಿರ್ದೇಶಕ ನಂದಕಿಶೋರ್, ಅತ್ತಿಗೆ ಸೇರಿದಂತೆ ರಾಜಕೀಯ ನಾಯಕರ ಉಸ್ತುವಾರಿ ಜೋರಾಗಿತ್ತು.

ಇದೀಗ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಇನ್ನು ಸೋನಲ್ ಮಂಥೆರೋ ಕಡೆಯಿಂದ ಕ್ರಿಶ್ಚಿಯನ್ ಸಂಪ್ರದಾಯದಂತೆ ವೆಡ್ಡಿಂಗ್ ನಡೆಯಲಿದೆ. ಇದೆಲ್ಲದರ ನಡುವೆ ಎಲ್ಲರಿಗೂ ಕಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್(darshan) ಅನುಪಸ್ಥಿತಿ. ಇವರಿಬ್ಬರ ಮದುವೆಗೆ ಮೊದಲು ಕಾರಣರಾಗಿದ್ದೆ ನಟ ದರ್ಶನ್ ಎಂದು ಹೇಳಲಾಗಿದೆ. ರಾಬರ್ಟ್ ಸಿನ್ಮಾ ಸೆಟ್ ನಲ್ಲಿ ಇವರ ನಡುವೆ ಬೆಳೆದ ಸ್ನೇಹ, ಪ್ರೀತಿಗೆ ದರ್ಶನ್ ಸಾಥ್ ನೀಡಿ ಮದುವೆ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಮೊದಲು ನಟ ದರ್ಶನಗೆ ಜೈಲಿಗೆ ಹೋಗಿ ಕೊಟ್ಟು ಬಂದ ತರುಣ್, ಯಾವುದೇ ಕಾರಣಕ್ಕೂ ಡೇಟ್ ಚೇಂಜ್ ಮಾಡಬೇಡ ಎಂದು ಬಾಸ್(D Boss) ಹೇಳಿದ್ದಾರೆ. ಅಷ್ಟರಲ್ಲಿ ಬರ್ತಿನಿ ಎಂದಿದ್ದಾರೆ ಎಂದಿದ್ದರು. ಬಟ್, ದರ್ಶನಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದನ್ನು ನೆನೆದು ತರುಣ್, ಸೋನಲ್ ಕಣ್ಣೀರು ಹಾಕಿದರು.

ಇನ್ನು ಅನೇಕ ನಟ, ನಟಿಯರು ಗೈರು ಈ ವೇಳೆ ಕಂಡು ಬಂದಿದೆ. ಬಹುತೇಕ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಉದ್ಯಮಿಗಳು, ರಾಜಕೀಯ ಗಣ್ಯರು ಭಾಗವಹಿಸಿ ನವ ಜೋಡಿ ಶುಭ ಕೋರಿದರು. ಇದರ ನಡುವೆ ಕೆಲವು ಪ್ರಮುಖರ ಗೈರು ಯಾವ ಕಾರಣಕ್ಕೆ ಅನ್ನೋ ಪ್ರಶ್ನೆ ಮೂಡಿದೆ. ಮಂಗಳೂರು ಮೂಲದ ನಟಿ ಸೋನಲ್ ಮಂಥೆರೋ ವಯಸ್ಸು 29, ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ತರುಣ್ ಸುಧೀರ್ ವಯಸ್ಸು 41. ಅಂತರಧರ್ಮಿಯ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST