ಪ್ರಜಾಸ್ತ್ರ ಸುದ್ದಿ
ಮುಂಬೈ, ನವದೆಹಲಿ, ತಾರಾಪೀಠ: ದೇಶದ ಮೂರು ಕಡೆ ಸೋಮವಾರ ಮುಂಜಾನೆ ಬೆಂಕಿ ಅನಾಹುತ ಸಂಭವಿಸಿದೆ. ಇದರಿಂದಾಗಿ 9 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮುಂಬೈನ ಕಾಂದಿವಲಿಯಲ್ಲಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಗಡ ನಡೆದಿದೆ. ಈ ವೇಳೆ 9 ಜನರನ್ನು ರಕ್ಷಿಸಲಾಗಿದೆ.
ನವದೆಹಲಿಯ ಪಶ್ಚಿಮ ದೆಹಲಿಯ ರಘುಬೀರ ನಗರದಲ್ಲಿನ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಇಬ್ಬರು ಮೃತಪಟ್ಟಿದ್ದಾರೆ. ಇ-ಆಟೋದ ಬ್ಯಾಟರ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಇನ್ನು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ತಾರಾಪೀಠದಲ್ಲಿ ನಾಲ್ಕು ಅಂತಸ್ತಿನ ಹೋಟೆಲ್ ನಲ್ಲಿ ಬೆಂಕಿ ದುರಂತ ನಡೆದಿದೆ. ಇಲ್ಲಿ ಬರೋಬ್ಬರಿ 7 ಜನರು ಮೃತಪಟ್ಟಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಬೆಂಕಿ ಅನಾಹುತ ಸಂಭವಿಸಿದೆ.



