ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ಕಡೆಯ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಒಂದು ವಿಚಾರ ವಿಚಾರಣೆಯನ್ನು ಮುಂದೂಡಿದೆ. ಎರಡೂವರೆ ತಿಂಗಳಲ್ಲಿ 64 ಟಿಎಂಸಿ ನೀರು ಬರಬೇಕಿತ್ತು. 14 ಟಿಎಂಸಿ ಬಂದಿದೆ ಎಂದು ತಮಿಳುನಾಡು ಪರ ವಕೀಲರು ವಾದ ಮಂಡಿಸಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿದೆ. ನಮಗೆ ಕಷ್ಟವಿದ್ದರೂ ನೀರು ಹರಿಸಿದ್ದೇವೆ ಎಂದು ಕರ್ನಾಟಕ ಪರ ವಕೀಲರ ವಾದ ಮಂಡಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದ ಪ್ರಕಾರ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಆದರೆ, ಕಾವೇರಿ ಕೊಳ್ಳದ ಜಲಾಶಯಗಳಿಂದ ನಿತ್ಯ ಕೇವಲ ಐದಾರು ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಇದುವರೆಗೂ 13-14 ಟಿಎಂಸಿ ನೀರು ಬಂದಿದೆ ವಾದಿಸಲಾಯಿತು.
ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧಿಸುತ್ತಿದೆ. ಇಂತಹ ಪರಿಸ್ಥಿತಿ ಆಣೆಕಟ್ಟು ಸಹಾಯಕ್ಕೆ ಬರುತ್ತದೆ ಅನ್ನೋ ವಾದವನ್ನು ಕರ್ನಾಟಕ ಮಂಡಿಸಿತು. ಎರಡು ಕಡೆ ವಾದ ಆಲಿಸಿದ ಸುಪ್ರೀಂ ಕೋರ್ಟ್ ಮುಂದಿನ ವಾರ ಪರಿಸ್ಕೃತ ಮಾಹಿತಿಯೊಂದಿಗೆ ಪರಿಶೀಲನೆ ನಡೆಸೋಣ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.



