LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರ ರಚನೆಗೆ ವಿಜಯಗೆ ಅವಕಾಶ ಕೊಡಲು ರಾಜ್ಯಪಾಲರ ಮೀನಾಮೇಷ!

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷದ ನಾಯಕ, ನಟ ವಿಜಯ್ ಜೋಶಪ್ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. 24 ಗಂಟೆಯಲ್ಲಿ ಎರಡು ಬಾರಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

234 ಸದಸ್ಯ ಬಲವನ್ನು ತಮಿಳುನಾಡು ವಿಧಾನಸಭೆ ಹೊಂದಿದೆ. ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ವಿಜಯ್ ಎರಡು ಕಡೆ ಸ್ಪರ್ಧಿಸಿ ಗೆದ್ದಿದ್ದು, ಒಂದು ಕಡೆ ರಾಜೀನಾಮೆ ನೀಡಬೇಕಿದೆ. ಆಗ ಟಿವಿಕೆ 107 ಸದಸ್ಯರಾಗುತ್ತಾರೆ. 5 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲ ನೀಡಿದೆ. ಪಿಎಂಕೆ 4, ವಿಸಿಕೆ, ಐಯುಎಂಎಲ್, ಸಿಪಿಐ ಹಾಗೂ ಸಿಪಿಐ(ಎಂ) ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಬಿಜೆಪಿ, ಎಎಂಎಂಕೆ, ಡಿಎಂಡಿಕೆ ತಲಾ 1 ಸ್ಥಾನ ಪಡೆದಿವೆ. ಮ್ಯಾಜಿಕ್ ನಂಬರ್ 118 ಇದೆ. ಹೀಗಾಗಿ ವಿಜಯ್ ಸರ್ಕಾರ ರಚನೆಗೆ ಕಸರತ್ತು ನಡೆಸಿದ್ದಾರೆ.

ರಾಜ್ಯಪಾಲರು ಅತಿ ದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚನೆ ಮಾಡಲು ಅವಕಾಶ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ಬಹುಮತವನ್ನು ಸದನದಲ್ಲಿ ತೋರಿಸಲು ಅವಕಾಶವಿದ್ದು, ಮೊದಲು ಸರ್ಕಾರ ರಚನೆಗೆ ಅವಕಾಶವಾದರೂ ಕೊಡಬೇಕು. ಆದರೆ, ಮ್ಯಾಜಿಕ್ ನಂಬರ್ 118 ಶಾಸಕರ ಸಹಿಯೊಂದಿಗೆ ಬನ್ನಿ ಎನ್ನುತ್ತಿದ್ದಾರೆ. ಇದರಿಂದಾಗಿ ಗುರುವಾರ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಸಧ್ಯ ಬ್ರೇಕ್ ಬಿದ್ದಿದೆ. ಮುಂದೆ ಏನಾಗುತ್ತೆ ನೋಡಬೇಕಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST