LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಸ್ತಾನಗೆ ಮನೆಗೆ ಕಳಿಸಿ ಫೈನಲ್ ಗೆ ಬಂದ ಗುಜರಾತ್

ಪ್ರಜಾಸ್ತ್ರ ಸುದ್ದಿ

ಟಿರಾ(Tira): ಪಂಜಾಬ್ ನ ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಸಂಜೆ ನಡೆದ 3ನೇ ಪ್ಲೇ ಆಫ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಜಿಟಿ ನಾಯಕ ಶುಭನಂ ಗಿಲ್ ಭರ್ಜರಿ ಶತಕದ ನೆರವಿನಿಂದ ರಾಯಲ್ಸ್ ನೀಡಿದ್ದ 215 ರನ್ ಗಳ ಗುರಿಯನ್ನು ಮುಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡ, ಯುವ ಆಟಗಾರ ವೈಭವ ಸೂರ್ಯವಂಶಿ ಅಮೋಘ 96, ಜಡೇಜಾ ಅಜೇಯ 45 ರನ್ ಗಳಿಂದಾಗಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿತು. ನಾಯಕನ ರಿಯಾನ್ ಪರಾಗ್ 11, ಜೈಸ್ವಾಲ್ 1, ಧ್ರುವ್ ಜುರ್ಲೆ 7, ದಸುನ್ ಶಂಕಾ 3 ರನ್ ಗಳಿಸಿ ವಿಫಲರಾದರು. ಜಿಟಿ ಪರ ರಬಡಾ, ಹೋಲ್ಡರ್ ತಲಾ 2 ವಿಕೆಟ್ ಪಡೆದರು. ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ಆರಂಭದಲ್ಲಿಯೇ ಅಬ್ಬರಿಸಿತು. ನಾಯಕ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ 167 ರನ್ ಗಳ ಜೊತೆಯಾಟ ಆಡಿ ಪಂದ್ಯ ಗೆಲುವಿಗೆ ಕಾರಣರಾದರು. 12.5 ಓವರ್ ಗಳಲ್ಲಿ ಇವರು ಇಷ್ಟೊಂದು ರನ್ ಗಳಿಸಿದರು. ಸಾಯಿ ಸುದರ್ಶನ್ 32 ಬೌಲ್ ಗಳಲ್ಲಿ 58, ಗಿಲ್ 53 ಬೌಲ್ ಗಳಲ್ಲಿ 104 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 16 ರನ್ ಗೆ ಔಟ್ ಆದರು. ಬಟ್ಲರ್ 9, ರಾಹುಲ್ ತೇವಾಟಿಯಾ 17 ರನ್ ಗಳಿಸಿದರು. 18.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ ಫೈನಲ್ ಪ್ರವೇಶಿಸಿದರು. ರಾಜಸ್ತಾನ ನಿರಾಸೆಯಿಂದ ಹೊರ ನಡೆಯಿತು. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಕಪ್ ಗಾಗಿ ಫೈನಲ್ ಹಣಾಹಣಿ ನಡೆಯಲಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST