LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಎಸ್ ಅಧಿಕಾರಿಗೆ ಕೋರ್ಟ್ ನಲ್ಲೇ ಉತ್ತರಿಸುತ್ತೇನೆ ಎಂದ ಹೆಚ್ಡಿಕೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಡುವಿನ ಆರೋಪ, ಪ್ರತ್ಯಾರೋಪ ಈಗ ಕಾನೂನು ಅಂಗಳಕ್ಕೆ ಬಂದಿದೆ. ಹೆಚ್.ಡಿ ಕುಮಾರಸ್ವಾಮಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಐಪಿಎಸ್ ಅಧಿಕಾರಿ ಚಂದ್ರಶೇಖರ್, ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಡಿಕೆ, ಅಧಿಕಾರಿಗೆ ನಾನು ಕೋರ್ಟ್ ನಲ್ಲೇ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಚಂದ್ರಶೇಖರ್ ಅವರ ಬಗ್ಗೆ ಕೆಲ ವಿಚಾರಗಳನ್ನು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅವರು ದೂರು ನೀಡಿದ್ದಾರೆ. ಈ ವಿಚಾರ ಕೋರ್ಟ್ ಗೆ ಬರಲಿ ನಾನು ಹೋಗುತ್ತೇನೆ. ಎಲ್ಲಿಯೂ ಹೋಗುವುದಿಲ್ಲ. 12 ವರ್ಷಗಳಿಂದ ನನ್ನ ವಿರುದ್ಧ ಪ್ರಕರಣ ನಡೆಯುತ್ತಿದೆ. ನಾನು ಅವರಿಗೆ ಹೆದರಬೇಕಿಲ್ಲ. ನನಗೆ ಅವರು ಹೆದರಬೇಕಿಲ್ಲ. ರಾಜಕೀಯವಾಗಿ ನನ್ನ ವಿರುದ್ಧ ದೂರು ಸಲ್ಲಿಸಿದ್ದಾರೆ. ನಮ್ಮ ವಕೀಲರು ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂದಿದ್ದಾರೆ. ಇದರೊಂದಿಗೆ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕೇಂದ್ರ ಸಚಿವರ ಕಾದಾಟ ಕೋರ್ಟ್ ತನಕ ಬಂದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST