ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕ್ಯಾಬ್ ಗಾಗಿ ಕಾಯುತ್ತಿದ್ದ ಮಹಿಳೆಗೆ ನಿನ್ನ ರೇಟ್ ಎಷ್ಟು ಎಂದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಾಮಮೂರ್ತಿ ನಗರದಲ್ಲಿ ಇಂತಹದೊಂದು ಘಟನೆ ನಡೆದಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯನ್ನು ವಿಜಯ್ ರಾಘವ್(42) ಎಂದು ಗುರುತಿಸಲಾಗಿದೆ. ಹೊರಮಾವು ನಿವಾಸಿಯಾಗಿರುವ ಈತ ಹಣ್ಣಿನ ವ್ಯಾಪಾರಿಯಾಗಿದ್ದಾನೆ.
ಸ್ಕೂಟಿಯಲ್ಲಿ ಬಂದ ಈತ ಮಹಿಳೆಗೆ ನಿನ್ನ ರೇಟ್ ಎಷ್ಟು ಎಂದಿದ್ದಾನೆ. ಮಹಿಳೆ ಆತನಿಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ವಿಡಿಯೋ ರೆಕಾರ್ಡ್ ಮಾಡುತ್ತಿದ್ದೇನೆ ಎಂದಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಕೂಟರ್ ನಂಬರ್ ಮೂಲಕ ವ್ಯಕ್ತಿಯನ್ನು ಪತ್ತೆ ಮಾಡಿದಾಗ ಘಟನೆ ವೇಳೆ ಮತ್ತೊಬ್ಬರ ಗಾಡಿ ತೆಗೆದುಕೊಂಡು ಬಂದಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.



