ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪ್ರತಿಯೊಬ್ಬ ಅರ್ಹ ರೈತರಿಗೆ ಬರ ಪರಿಹಾರ ಜಮೆಯಾಗಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿರುವವರಿಗೆ ಪರಿಹಾರ ಜಮೆಯಾಗಿದೆ. ಕೆಲವು ಬ್ಯಾಂಕ್ ಖಾತೆಗಳಲ್ಲಿ ಸಣ್ಣಪುಟ್ಟ ದೋಷಗಳಿರುವುದರಿಂದ ವಿಳಂಬವಾಗಿದೆ. ಯಾರೂ ಆತಂಕ ಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಯಾರ ಖಾತೆಗೆ ಹಣ ಜಮೆಯಾಗಿಲ್ಲವೋ ಅಂತಹ ಖಾತೆಗಳನ್ನು ಪರಿಶೀಲಿಸಿ ದೋಷಗಳನ್ನು ಸರಿಪಡಿಸುತ್ತೇವೆ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿದ್ದರೂ ರಾಜ್ಯ ಸರ್ಕಾರವೇ ರೈತರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ಅರ್ಹ ರೈತರಿಗೆ ನೆರವು ನೀಡಲಾಗುವುದು. ಕೆಲವು ಫಲಾನುಭವಿಗಳು ತಪ್ಪಾದ ಬ್ಯಾಂಕ್ ಖಾತೆ ನೀಡಿದ್ದಾರೆ. ಕೆಲವು ಸಾಲದೊಂದಿಗೆ ಜೋಡಣೆಯಾಗಿವೆ. ಇದನ್ನು ಸರ್ಕಾರ ಪರಿಶೀಲನೆ ಮಾಡಲಾಗುತ್ತಿದೆ ಎಂದಿದ್ದಾರೆ.


