LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಿವೀಸ್ ವಿರುದ್ಧ ಭಾರತ 720 ರನ್.. ಬರೆದ ಹಲವು ದಾಖಲೆಗಳು

ಪ್ರಜಾಸ್ತ್ರ ಸುದ್ದಿ

ವೆಲ್ಲಿಂಗ್ಟನ್(Wellington): ನ್ಯೂಜಿಲೆಂಡ್ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಕಮಾಲ್ ಮಾಡುತ್ತಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದರೊಂದಿಗೆ ಹಲವು ದಾಖಲೆಗಳನ್ನು ಬ್ಲೂ ಬಾಯ್ಸ್ ತಂಡ ಮಾಡಿದೆ.

ನ್ಯೂಜಿಲೆಂಡ್ ನೆಲದಲ್ಲಿ ಯಾವುದೇ ತಂಡ ಗಳಿಸದ ರನ್ ಭಾರತ ಗಳಿಸಿದೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧ ಯಾವುದೇ ತಂಡ ಇಷ್ಟೊಂದು ರನ್ ಗಳಿಸಿಲ್ಲ. 1995ರಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 660 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. 2010ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 707 ರನ್ ಗಳಿಸಿದ್ದ ದಾಖಲೆಯನ್ನು ಸ್ವತಃ ಭಾರತ ಅಳಿಸಿ ಹಾಕಿತು.

ಇನ್ನು ಮೊದಲು 7 ವಿಕೆಟ್ ಗಳ ಜೊತೆಯಾಟದಲ್ಲಿ 50ಕ್ಕೂ ಹೆಚ್ಚು ರನ್ ಬಂದಿವೆ. 6 ಬ್ಯಾಟ್ಸಮನ್ ಗಳು 70ಕ್ಕೂ ಹೆಚ್ಚು ರನ್ ಗಳಿಸಿರುವುದು ವಿಶೇಷ. ಅಲ್ಲದೆ ಮೊದಲ ಐವರು 80ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು ಕೆ.ಎಲ್ ರಾಹುಲ್ ಏಷ್ಯಾದ ಹೊರಗೆ ಬಾರಿಸಿದ 8ನೇ ಶತಕವಾಗಿದೆ. ಇದರೊಂದಿಗೆ 12 ಶತಕ ಸಿಡಿಸಿದರು. ವಿಕೆಟ್ ಕೀಪರ್ ರಿಷಬ್ ಪಂತ್ 9ನೇ ಶತಕ ದಾಖಲಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದ ಸಾಲಿನಲ್ಲಿ 2ನೇ ಸ್ಥಾನಕ್ಕೆ ಏರಿದ್ದಾರೆ. ಇಂಗ್ಲೆಂಡ್ ನ ಬೆನ್ ಸ್ಟ್ರೋಕ್ 138 ಸಿಕ್ಸ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ 107 ಸಿಕ್ಸ್ ಗಳಿಸಿ 3ನೇ ಸ್ಥಾನ ಪಡೆದಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST