ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕೀಳು ಪ್ರಚಾರಕ್ಕಾಗಿ ರವಿ ಹಂಜ್ ಮಹಾತ್ಮರನ್ನು ಕೆಟ್ಟದಾಗಿ ಟೀಕಿಸುವ ಕೆಲಸ ಮಾಡಿದ್ದಾರೆ. ಬಸವಣ್ಣನ ಕಾರಣಕ್ಕೆ ಸಾವಿರಾರು ಮಠಗಳು ಹುಟ್ಟಿವೆ. ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಉಳಿದಿದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ ಈ ರೀತಿ ಹೇಳಿದರು.
ಬಸವಣ್ಣ ಸೇರಿದಂತೆ ಮಹಾತ್ಮರ ಬಗ್ಗೆ ಕೀಳಾಗಿ ಮಾತನಾಡುವ, ಬರೆಯುವರ ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗಬೇಕು. 2007ರಲ್ಲಿ ಬಸವಣ್ಣನ ಹುಟ್ಟಿನ ಮೂಲ ಪ್ರಶ್ನೆ ಮಾಡಿ ಅವಮಾನಿಸಿದ್ದರು. ಬಸವಣ್ಣ ಎಲ್ಲ ಜಾತಿಗೂ ಆದರ್ಶ. ಬಸವಣ್ಣನಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಅನ್ನೋ ಕೆಲವರ ಅಹಂಗೆ ಹೊಡೆತ ಕೊಡಬೇಕಿದೆ. ಈ ಬಗ್ಗೆ ಹೊಸ ಕಾನೂನು ರಚನೆಯಾಗಬೇಕು ಅಂತಾ ಹೇಳಿದ್ದಾರೆ.


