LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂತಾರ-1 ಸಿನಿಮಾ ಶೂಟಿಂಗ್: ಬಸ್ ಅಪಘಾತ, 6 ಕಲಾವಿದರಿಗೆ ಗಂಭೀರ ಗಾಯ

ಪ್ರಜಾಸ್ತ್ರ ಸುದ್ದಿ

ಕೊಲ್ಲೂರು(Kolloru): ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ-1 ಚಿತ್ರದ ಶೂಟಿಂಗ್ ಗೆ ತೆರಳುತ್ತಿದ್ದ ಮಿನಿ ಬಸ್ ಅಪಘಾತವಾಗಿದೆ. ಸುಮಾರು 20 ಜೂನಿಯರ್ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಕೊಲ್ಲೂರು ಹತ್ತಿರ ಜಡ್ಕಳ್ ಬಳಿ ಅಪಘಾತವಾಗಿದೆ. 6 ಜನರಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಕರಾವಳಿ ಭಾಗದ ವಿವಿಧ ಕಡೆ ಚಿತ್ರೀಕರಣ ನಡೆಸಲಾಗುತ್ತಿದೆ. ಮುದೂರಿನಲ್ಲಿ ಶೂಟಿಂಗ್ ಮುಗಿಸಿ ಕೊಲ್ಲೂರು ಕಡೆ ಹೊರಟಿದ್ದಾಗ ಮಿನಿ ಬಸ್ ಅಪಘಾತವಾಗಿದೆ. ಕಾಂತಾರ ಸಿನಿಮಾ ಈಗಾಗ್ಲೇ ಸೂಪರ್ ಹಿಟ್ ಆಗಿದೆ. ಅದು ಪಾರ್ಟ್ 2 ಆಗಿದ್ದು, ಈಗ ಪಾರ್ಟ್ 1ರ ಶೂಟಿಂಗ್ ನಡೆಸಲಾಗುತ್ತಿದೆ. ಹೊಂಬಾಳೆ ಸಂಸ್ಥೆ ಇದನ್ನು ನಿರ್ಮಾಣ ಮಾಡುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST