ಪ್ರಜಾಸ್ತ್ರ ಸುದ್ದಿ
ಸೇಂಟ್ ಲೂಯಿಸ್: ಭಾರತದ ಯುವ ಚೆಸ್ ಆಟಗಾರ, ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಮುಡಿಗೆ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಏರಿದೆ. ಅಮೆರಿಕದ ಫ್ಯಾಬಿಯಾನೊ ಕರುವಾನ ವಿರುದ್ಧ ಫೈನಲ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಚೆಸ್ ಆಟಗಾರನಾಗಿದ್ದಾರೆ.
ಸೇಂಟ್ ಲೂಯಿಸ್ ಚೆಸ್ ಕ್ಲಬ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರುವಾನ ಅವರನ್ನು 15-13 ಅಂತರದಿಂದ ಸೋಲಿಸಿದರು. ಈ ಮೂಲಕ 2 ಲಕ್ಷ ಅಮೆರಿಕನ್ ಡಾಲರ್(1.67 ಕೋಟಿ) ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಈ ವಿಜಯದೊಂದಿಗೆ ಮುಂದಿನ ವರ್ಷದ ಗ್ರ್ಯಾಂಡ್ ಚೆಸ್ ಟೂರ್ ಗೆ ನೇರವಾಗಿ ಅರ್ಹತೆ ಪಡೆದಿದ್ದಾರೆ.



