ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬಾಲಿವುಡ್ ಅಂಗಳದ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಕಾಲಾ ಹಿರನ್ ಅನ್ನೋ ಚಿತ್ರ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ. ನಟ ಸಲ್ಮಾನ್ ಖಾನ್ ಪರ ವಕೀಲರು ಸಿನಿಮಾ ಬಿಡುಗಡೆಗೆ ತಡೆ ಸಂಬಂಧ ಸಿನಿಮಾದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಸಿನಿಮಾಗೆ ಸಂಬಂಧ ಪೋಸ್ಟರ್ ಗಳು, ಪ್ರಚಾರದ ವಸ್ತುಗಳನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.
ಕಾಲಾ ಹಿರನ್ : ದಿ ಬ್ಯಾಟಲ್ ಫಾರ್ ಲೆಗಸಿ ಅನ್ನೋ ಚಿತ್ರ ಸಲ್ಮಾನ್ ಖಾನ್ ಜೀವನದಲ್ಲಿ ಸಾಕಷ್ಟು ಕಾಡಿದ, ಕಾನೂನು ಹೋರಾಟ ನಡೆಸಿದ ಕೃಷ್ಣಮೃಗ ಬೇಟೆಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಜೂನ್ 20ರಂದು ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಈಗಾಗ್ಲೇ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ಸಲ್ಮಾನ್ ಖಾನ್ ಹೋಲುವ ನಟನಿದ್ದಾನೆ. ಅವರ ಟ್ರೇಡ್ ಮಾರ್ಕ್ ಬ್ರೇಸ್ ಲೆಟ್ ಸಹ ಇದೆ.
ಕಾಲಾ ಹಿರನ್ ಸಿನಿಮಾವನ್ನು ಭರತ್.ಎಸ್ ಶ್ರೀನಾಥೆ ನಿರ್ದೇಶನ ಮಾಡುತ್ತಿದ್ದಾರೆ. ಅಮಿತ್ ಜಾನಿ ನಿರ್ಮಾಣ ಮಾಡುತ್ತಿದ್ದಾರೆ. ಈ ನಿರ್ಮಾಪಕರು ಹಿಂದೆ ಹಲವು ವಿವಾದಾತ್ಮಕ ಸಿನಿಮಾಗಳ ನಿರ್ಮಾಣದ ವಿಚಾರ ಕುರಿತೆ ಚರ್ಚೆಯಲ್ಲಿದ್ದರು. ಈಗ ಮತ್ತೆ ಅಂತಹದ್ದೆ ವಿಚಾರದಿಂದ ಮುನ್ನೆಲೆಗೆ ಬಂದಿದ್ದಾರೆ.



