ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನಲ್ಲಿ ಸ್ಥಗಿತಗೊಂಡಿರುವ ವಿಕಲಚೇತನರ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಸಿಂದಗಿ, ಎಂಆರ್ ಡಬ್ಲು, ವಿಆರ್ ಡಬ್ಲು, ಯುಆರ್ ಡಬ್ಲು ಒಕ್ಕೂಟ ಸಿಂದಗಿ ಹಾಗೂ 'ಪೀರ್ ಗಾಲಿಸಾಬ್ ಅಂಗವಿಕಲರ ವಿಕಾಸ ಸಂಘ ಆಲಮೇಲ ಇವುಗಳ ಜಂಟಿ ಆಶ್ರಯದಲ್ಲಿ ಗುರುವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಈಗಾಗಲೇ ಪಿಂಚಣಿ ರದ್ದಾಗಿರುವ ವಿಕಲಚೇತನರು ಇಲಾಖೆಯ ನಿರ್ದೇಶನದಂತೆ ಅಗತ್ಯ ದಾಖಲೆಗಳನ್ನು ತಾಲೂಕು ಕಚೇರಿಗೆ ಸಲ್ಲಿಸಿದರೆ, ಶೀಘ್ರದಲ್ಲಿಯೇ ಪಿಂಚಣಿ ಮರುಚಾಲನೆಗೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ವಿಕಲಚೇತನರ ಅನುಕೂಲಕ್ಕಾಗಿ ತಾಲೂಕು ಕಚೇರಿಯಲ್ಲಿ ಶೀಘ್ರವೇ 'ವಿಶೇಷ ಕೌಂಟರ್' ತೆರೆಯಲಾಗುವುದು ಎಂದು ಭರವಸೆ ನೀಡಿದರು. ಸಲ್ಲಿಸಲಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ವಿಜಯಪುರ ಜಿಲ್ಲಾ ಸಮಿತಿ ಅಧ್ಯಕ್ಷರಾದ ವಿಠ್ಠಲ ಕರ್ಜಗಿ, ಸಿಂದಗಿ ತಾಲೂಕು ಘಟಕದ ಉಪಾಧ್ಯಕ್ಷ ಸುಧೀರ್ ಭಜಂತ್ರಿ, ತಾಲೂಕು ಪಂಚಾಯತಿ ಎಂ.ಆರ್.ಡಬ್ಲ್ಯೂಗಳಾದ ಮುತ್ತುರಾಜ ಸಾತಿಹಾಳ, ಸಿದ್ದಯ್ಯ ಮಠ ಹಾಗೂ ಮುಖಂಡರಾದ ಗುರು ಕುಂಬಾರ, ಶರಣಗೌಡ ಬಿರಾದಾರ, ಶ್ರೀಮಂತ ವಡ್ಡರ, ಅಮೀರ್ ಮಂದೇವಾಲಿ, ಗುರುನಾಥ್ ಬಂಡಿವಡ್ಡರ, ಸಿದ್ದು ಕಲ್ಲೂರ, ಸಾಯಿಬಣ್ಣ ಪೂಜಾರಿ, ಮಲಕಪ್ಪ ಬ್ಯಾಕೋಡ, ಸುರೇಶ ಜವಳಗಿ, ಬಾಳರಾಮ ರಜಪೂತ, ಕಾಶಿನಾಥ ಹೂಗಾರ, ಕಲ್ಲಪ್ಪ ಕ್ಷತ್ರಿ, ಗ್ರಾಮ ಪಂಚಾಯಿತಿ ಪುನರ್ವಸತಿ ಕಾರ್ಯಕರ್ತರಾದ ವಿಠ್ಠಲ ಬಾಗೇವಾಡಿ, ಪುಂಡಲಿಕ ರಾಠೋಡ, ರಾಘವೇಂದ್ರ ಕೋಣಸಿರಸಗಿ, ಶರಣಪ್ಪ ಗೌಂಡಿ ಸೇರಿದಂತೆ ವಿವಿಧ ವಿಶೇಷ ಚೇತನರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪೋಷಕರು ಹಾಜರಿದ್ದರು.



