LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಾವಣಗೆರೆ ಡಾಕ್ಟರ್ ಗೆ ರಾಷ್ಟ್ರಪತಿಗಳಿಂದ ವಿಶೇಷ ಆಹ್ವಾನ

ಪ್ರಜಾಸ್ತ್ರ ಸುದ್ದಿ

ದಾವಣಗೆರೆ(Davanagere): ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಔತಣಕೂಟ ಆಯೋಜಿಸಿದ್ದಾರೆ. ಇದರಲ್ಲಿ ಭಾಗವಹಿಸಲು ದೇಶದ 528 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಭಾಗವಹಿಸಲು ದಾವಣಗೆರೆಯ ವೈದ್ಯ ಸುರೇಶ್ ಹಗನವಾಡಿ ಅವರಿಗೂ ಆಹ್ವಾನ ಬಂದಿದ್ದು, ಅಂಚೆ ಇಲಾಖೆಯ ಕಚೇರಿ ಮುಖ್ಯಾಧಿಕಾರಿಗಳೇ  ಆಹ್ವಾನ ಪತ್ರಿಕೆಯನ್ನು ತೆಗೆದುಕೊಂಡು ಬಂದಿದ್ದಾರೆ.

ಹಿಮೋಫಿಲಿಯಾ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ.ಸುರೇಶ್ ಹಗನವಾಡಿ ಹಿಮೋಫಿಲಿಯಾ ಕಾಯಿಲೆಯಿಂದ ಬಳಲುತ್ತಿರುವವರ ಪಾಲಿನ ಆಶಾಕಿರಣವಾಗಿದ್ದಾರೆ. ಕಳೆದ 40 ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಇದನ್ನು ಪರಿಗಣಿಸಿ ಇತ್ತೀಚೆಗೆ ಶ್ರೇಷ್ಠ ದಿವಾಂಜನ್ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ನೀಡಿದ್ದಾರೆ. ಇದೀಗ ಔತಣಕೂಟದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಇಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್ ರಂತಹ ಗಣ್ಯರು ಭಾಗವಹಿಸುತ್ತಿದ್ದಾರೆ. ಸ್ವತಃ ಹಿಮೋಫಿಲಿಯಾ ಕಾಯಿಲೆಯಿಂದ ಬಳಲಿದ ಡಾ.ಸುರೇಶ್ ಹಗನವಾಡಿ ಅಂತವರ ಸೇವೆ ಮಾಡುತ್ತಿರುವುದಾಗಿಯೇ ಇಂತಹ ಗೌರವ ಸಲ್ಲುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST