LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಲೆ ಚಾರ್ಜ್ ಶೀಟ್ ಸಲ್ಲಿಕೆ: ಪವಿತ್ರಾಗೌಡ ಎ1, ದರ್ಶನ್ ಎ2

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ(Murder Case) ಪ್ರಕರಣ ಸಂಬಂಧ ಪೊಲೀಸರು ಬುಧವಾರ ನ್ಯಾಯಾಲಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ನಟ ದರ್ಶನ್(Darshan), ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಸಾಗಿದೆ. ಕೊಲೆ ಪ್ರಕರಣದ ತನಿಖಾ ತಂಡ ಬರೋಬ್ಬರಿ 3,991 ಪುಟಗಳ ದೋಷಾರೋಪ(Shargesheet) ಪಟ್ಟಿಯ 20 ಪ್ರತಿಗಳನ್ನು ಕೋರ್ಟ್ ಗೆ ಸಲ್ಲಿಸಿದೆ.

ಈ ಪ್ರಕರಣದಲ್ಲಿ 231ಕ್ಕೂ ಹೆಚ್ಚು ಸಾಕ್ಷಾದಾರರ ಹೇಳಿಕೆಯನ್ನು ದಾಖಲಿಸಲಾಗಿದೆ. 8 ವರದಿಗಳಿಗೆ. ಮೂವರು ಪ್ರತ್ಯಕ್ಷ ಸಾಕ್ಷಿಗಳಿವೆ. 27 ಜನರಿಂದ 164 ಹೇಳಿಕೆಗಳನ್ನು ಪಡೆಯಲಾಗಿದೆ. 59 ಜನರಿಂದ ಪಂಚನಾಮೆ, 56 ಪೊಲೀಸರು ಇದರಲ್ಲಿ ಕೆಲಸ ನಿರ್ವಹಿಸಿದ್ದಾರೆ. 8 ಇತರೆ ಸರ್ಕಾರಿ ಅಧಿಕಾರಿಗಳ ಹೇಳಿಕೆಗಳಿವೆ. ಈಗ ಸಲ್ಲಿಸಿರುವುದು ಪ್ರಾಥಮಿಕ ತನಿಖಾ ವರದಿಯಾಗಿದೆ. ತನಿಖೆ ಪೂರ್ಣಗೊಂಡ ಮೇಲೆ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST