LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸವತತ್ವ ಪಸರಿಸುತ್ತಿರುವ ಲಂಗೋಟಿ ಮನೆತನ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಚಾಂದಕವಠೆ ಗ್ರಾಮದ ಲಂಗೋಟಿ ಮನೆತನ ಈ ಭಾಗದ ಜನರಲ್ಲಿ ಬಸವತತ್ವವನ್ನು ಪಸರಿಸುತ್ತಿರುವ ಕೆಲಸ ಮಾಡುತ್ತಿದೆ. ಬುಧವಾರ ರಾತ್ರಿ ನುಲಿಚಂದಯ್ಯ ಜಯಂತಿ ಪ್ರಯುಕ್ತ ವಚನಾನುಭವ ಗೋಷ್ಠಿಯನ್ನು ಅವರ ತೋಟದ ಮನೆಯಲ್ಲಿ ನಡೆಸಲಾಯಿತು. ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಸ್ಥಾಪಕ ಸಂಪಾದಕ ನಾಗೇಶ ತಳವಾರ ಅವರು, ವಿಶ್ವಗುರು ಬಸವಣ್ಣ ಹಾಗೂ ನುಲಿಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯು ಸಮಾನತೆಯ ಕ್ರಾಂತಿಯನ್ನು ಹುಟ್ಟು ಹಾಕಿತು. ಯಾವ ಸಮಾಜ ಯಾರನ್ನೆಲ್ಲ ದೂರ ಸರಿಸಿತ್ತೋ ಅಂತವರನ್ನೆಲ್ಲ ಕೂಡಿಸಿ ಅನುಭವ ಮಂಟಪ ರಚನೆ ಮಾಡಿ ಎಲ್ಲರೂ ಸಮಾನರು ಅನ್ನೋ ಪರಿಕಲ್ಪನೆಯ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು ಅಂತಾ ಹೇಳಿದರು.

ಮುಖ್ಯ ಅತಿಥಿಗಳಾದ ಮುಳಸಾವಳಗಿಯ ಶಿಕ್ಷಕರಾದ ಜಿ.ಪಿ.ಬಿರಾದಾರ ಅವರು, ನುಲಿಚಂದಯ್ಯನವರ ಬದುಕಿನ ವೃತ್ತಾಂತ ತಿಳಿಸಿದರು. ಶಿವಣಗಿ ಗ್ರಾಮದಲ್ಲಿ ಜನಿಸಿದ ನುಲಿಚಂದಯ್ಯನವರು ಸೇರಿದಂತೆ ಶೇಕಡ 90ರಷ್ಟು ಶರಣರನ್ನು ಈ ನಾಡಿಗೆ ಕೊಟ್ಟ ಜಿಲ್ಲೆ ವಿಜಯಪುರ. ಇದಕ್ಕಾಗಿ ನಾವೆಲ್ಲ ಹೆಮ್ಮೆ ಪಡಬೇಕು ಎಂದರು. ಈ ಜಗತ್ತು ಶೂನ್ಯ. ಅದರೊಳಗೆ ನಾವು ಬದುಕುತ್ತಿದ್ದೇವೆ ಅನ್ನೋದು ಮುಖ್ಯವಾದದ್ದು. ಹೀಗಾಗಿ ನಮ್ಮನ್ನು ತಿಳಿದುಕೊಳ್ಳಬೇಕಾಗಿದೆ. ಆಗ ಸತ್ಯಶೋಧನೆ ಆಗುತ್ತದೆ. ಅದರಂತೆ ನಮ್ಮ ಶರಣರು ಬದುಕಿರುವುದು ಎಂದು ಕಾರ್ಯಕ್ರಮ ಆಯೋಜಕಾರದ ಶಿಕ್ಷಕರಾದ ಶಿವಶರಣ ಲಂಗೋಟಿ ಅವರು ಹೇಳಿದರು. ಶಿಕ್ಷಕ ಗಂಗಾಧರ ಅವರು ಮಾತನಾಡಿದರು. ಶಿಕ್ಷಕರಾದ ಎಂ.ಡಿ.ಟಕ್ಕಳಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಬಾದಿಯವರು ವೇದಿಕೆ ಮೇಲಿದ್ದರು.

news_1788441165_0_284.webp

ಈ ವೇಳೆ ಹತ್ತಾರು ಮಕ್ಕಳು ವಚನಗಳನ್ನು ವಾಚಿಸಿದರು. ಶಂಕರ ಲಂಗೋಟಿ, ಬರಗಾಲಸಿದ್ದ ಲಂಗೋಟಿ, ಪರಮಾನಂದ ಲಂಗೋಟಿ, ಶ್ರೀಶೈಲ ಲಂಗೋಟಿ, ಶ್ರೀಶೈಲ ಕಲ್ಲೂರ, ಶರಣಬಸು ಕಟಘಿಗಾಣ, ಪರಮಣ್ಣ ನಾಟಿಕಾರ, ಪರಶುರಾಮ ನಾಟಿಕಾರ, ಬಸವರಾಜ ನಾಟಿಕಾರ, ಈರಣ್ಣ ಸಿಂದಗಿ, ಸುರೇಶ ಸಿಂದಗಿ, ಸಂತೋಷ ಸಿಂದಗಿ, ರಮೇಶ ಮಲಘಾಣ, ಬೀರಪ್ಪ ಯಂಬತ್ನಾಳ, ಸಿದ್ದಪ್ಪ ಯಂಬತ್ನಾಳ, ಮಾಳಪ್ಪ ಯಂಬತ್ನಾಳ, ಬಸು ನರಸುಣಗಿ ಸೇರಿದಂತೆ ತಾಯಿಯಂದಿರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST