ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಚಿನ್ನ ಖರೀದಿಸಬೇಡಿ. ವಿದೇಶಕ್ಕೆ ಹೋಗಬೇಡಿ ಎಂದು ಪ್ರಧಾನಿ ಮೋದಿ ಮತ್ತೊಮ್ಮೆ ಹೇಳಿದ್ದಾರೆ. ಸ್ವದೇಶಿ ಹಾಗೂ ವೋಕಲ್ ಫಾರ್ ಲೋಕಲ್ ವಿಚಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.
ಅವಶ್ಯವಿದ್ದಾಗ ಮಾತ್ರ ಚಿನ್ನ ಖರೀದಿಸಿ. ಅನಗತ್ಯವಾಗಿ ಬಂಗಾರ ಖರೀದಿಸಬೇಡಿ. ಮೋಜು, ಮಸ್ತಿಗಾಗಿ ವಿದೇಶಗಳಿಗೆ ಹೋಗುವುದು, ಮದುವೆ ಸಮಾರಂಭ ಆಯೋಜಿಸುವುದನ್ನು ಬಿಟ್ಟು ದೇಶದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ. ಸ್ವದೇಶಿ ಹಾಗೂ ಸ್ವಾವಲಂಬನೆಗೆ ನಾವು ಎಷ್ಟು ಮಹತ್ವ ನೀಡುತ್ತೆವೆಯೋ ಅಷ್ಟು ವೇಗವಾಗಿ ದೇಶ ಪ್ರಗತಿ ಹೊಂದಲಿದೆ. 140 ಕೋಟಿ ಭಾರತೀಯರು ಒಟ್ಟಾಗಿ ಆತ್ಮನಿರ್ಭರ ಭಾರತ, ವಿಕಸಿತ ಭಾರತ 2047ರ ಸಂಕಲ್ಪವನ್ನು ನನಸು ಮಾಡೋಣ ಬನ್ನಿ ಎಂದಿದ್ದಾರೆ.



