ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇವತ್ತಿನ ಯುವ ಜನತೆಯ ಕೈಗೆ ಬೈಕ್(Bike), ಕಾರು(Car) ಸಿಕ್ಕರೆ ಸಾಕು ಅತಿಯಾದ ವೇಗದಲ್ಲಿ ಚಲಾಯಿಸಿ ತಮ್ಮ ಜೀವದ ಜೊತೆಗೆ ಮತ್ತೊಬ್ಬರ ಜೀವ ಸಹ ತೆಗೆದು ಬಿಡುತ್ತಾರೆ. ಇಲ್ಲೊಬ್ಬ ಯವಕ ಟ್ಯಾಂಕರ್ ಓವರ್ ಟೇಕ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಈ ಒಂದು ಅಪಘಾತ(Accident) ನಡೆದಿದೆ.
https://twitter.com/AT39680305/status/1829883425496711275
ನೀರಿನ ಟ್ಯಾಂಕರ್ ಅನ್ನು ಹಿಂದಿಕ್ಕಿ ಹೋಗುವ ಸಂದರ್ಭದಲ್ಲಿ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದು ಬೈಕ್ ಕೆಳಗೆ ಬಿದ್ದಿದೆ. ನೋಡು ನೋಡುತ್ತಿದ್ದಂತೆ ಟ್ಯಾಂಕರ್ ಆ ಯುವಕನ ಮೇಲೆ ಹರಿದಿದೆ. ಈ ವಿಡಿಯೋ ಎದೆ ಝಲ್ ಎನ್ನಿಸುವಂತಿದೆ. ಗಾಡಿಗಳನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಸ್ವಲ್ಪ ಯಾಮಾರಾದರೆ ಏನೆಲ್ಲ ಅನಾಹುತವಾಗುತ್ತೆ ಎನ್ನುವುದು ನಿತ್ಯ ನೋಡುತ್ತಿದ್ದರೂ ಎಚ್ಚೆತ್ತುಕೊಳ್ಳದೆ ಇರುವುದು ನಿಜಕ್ಕೂ ನೋವಿನ ಸಂಗತಿ.



