LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತನಗಿಂತ 10 ವರ್ಷ ಚಿಕ್ಕವನನ್ನ ಮದುವೆಯಾಗಿದ್ದ ಊರ್ಮಿಳಾ ಡಿವೋರ್ಸ್ ಅರ್ಜಿ

ಪ್ರಜಾಸ್ತ್ರ ಸುದ್ದಿ

ಸಿನಿ ರಂಗದಲ್ಲಿ ಅಂತರ್ ಧರ್ಮೀಯ ಮದುವೆ. ತಮಗಿಂತ 15, 20 ವರ್ಷಗಳ ಸಣ್ಣವರೊಂದಿಗೆ ನಟರ ಮದುವೆ. ತಮಗಿಂತ 8-10 ವರ್ಷಗಳ ಸಣ್ಣವರೊಂದಿಗೆ ನಟಿಯರ ಮದುವೆ ಹೊಸದೇನೂ ಅಲ್ಲ. ಇದೇ ರೀತಿ ತನಗಿಂತ 10 ವರ್ಷ ಚಿಕ್ಕವನಾದ ಕಾಶ್ಮೀರಿ ಮೂಲದ ಉದ್ಯಮಿ, ಮಾಡೆಲ್ ಮೊಹ್ಸಿನ್ ಅಖ್ತರ್ ಮಿರ್ ಜೊತೆಗೆ ಮದುವೆಯಾಗಿದ್ದ ನಟಿ ಊರ್ಮಿಳಾ ಮಾತೋಂಡ್ಕರ್(Urmila Matondkar)  ಇದೀಗ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಜೋಡಿ ತಮ್ಮ 8 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಸಜ್ಜಾಗಿದ್ದಾರೆ.

50 ವರ್ಷದ ನಟಿ ಊರ್ಮಿಳಾ ಸಿನಿ ರಂಗದಿಂದ ದೂರ ಉಳಿದಿದ್ದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ವಿರುದ್ಧ ಸೋಲು ಅನುಭವಿಸಿದ್ದರು. 2023ರಲ್ಲಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಶಿವಸೇನೆಯಲ್ಲಿದ್ದಾರೆ.

ಊರ್ಮಿಳಾ ಫೆಬ್ರವರಿ 4, 2016ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ ತಮಗಿಂತ 10 ವರ್ಷ ಚಿಕ್ಕವರಾದ ಕಾಶ್ಮೀರ ಮೂಲದ ಉದ್ಯಮಿ, ಮಾಡೆಲ್ ಮೊಹ್ಸಿನ್(Mohsin Akthar Mir) ಜೊತೆಗೆ ಮದುವೆಯಾಗಿದ್ದರು. ಈ ಜೋಡಿ ಇದೀಗ ದೂರಾಗಲು ನಿರ್ಧರಿಸಿದೆ. ಇವರ ಈ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST