LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಮ್ತಾಜ್ ಅಲಿ ಆತ್ಮಹತ್ಯೆ ಹಿಂದೆ ಮಹಿಳೆ ಕೈವಾಡ!

ಪ್ರಜಾಸ್ತ್ರ ಸುದ್ದಿ

ಮಂಗಳೂರು(Mangaloru): ಮಾಜಿ ಶಾಸಕ ಮೊಯಿದ್ದೀನ್(Mohiuddin Bava) ಬಾವಾ ಸಹೋದರ ಮುಮ್ತಾಜ್(Mumtaz Ali) ಅಲಿ ಆತ್ಮಹತ್ಯೆಗೆ ಮಹಿಳೆಯೊಬ್ಬರ ಬ್ಲ್ಯಾಕ್ ಮೇಲ್ ಕಾರಣವೆಂದು ಹೇಳಲಾಗುತ್ತಿದೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಮಹಿಳೆ, ಆಕೆಯ ಪತಿ ಸೇರಿ 6 ಜನರ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ. ರೆಹಮತ್ ಅಲಿಯಾಸ್ ಆಯೇಷಾ, ಈಕೆ ಪತಿ ಶೋಯಬ್ ಆರೋಪಿಗಳಾಗಿದ್ದಾರೆ.

ಆಯೇಷಾ ಮಗು ಜೊತೆಗೆ ಮುಮ್ತಾಜ್ ಅಲಿ ಆಟವಾಡುತ್ತಿದ್ದ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್ ಗೆ ಹಾಕಿದ್ದಳು. ಈ ವಿಚಾರವಾಗಿ ಅಲಿ ಮನೆಯಲ್ಲಿ ತಡರಾತ್ರಿಯವರೆಗೂ ಜಗಳವಾಗಿದೆ. ಮುಮ್ತಾಜ್ ಅಲಿ ಅಕ್ಟೋಬರ್ 6ರ ಮುಂಜಾನೆ ಕೂಳೂರು ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೂವರ ಬಂಧನವಾಗಿದೆ. ಇನ್ನು ಮೂವರು ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST