Ad imageAd image

ಚಿನ್ನ, ಬೆಳ್ಳಿ ಆಮದು ಸುಂಕ ಶೇ15ರಷ್ಟು ಏರಿಸಿದ ಕೇಂದ್ರ ಸರ್ಕಾರ

Nagesh Talawar
ಚಿನ್ನ, ಬೆಳ್ಳಿ ಆಮದು ಸುಂಕ ಶೇ15ರಷ್ಟು ಏರಿಸಿದ ಕೇಂದ್ರ ಸರ್ಕಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಬುಧವಾರ ಶೇಕಡ 15ರಷ್ಟು ಏರಿಕೆ ಮಾಡಿದೆ. ಹೊಸ ದರ ಮೇ 13ರಿಂದಲೇ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪಶ್ಚಿಮ ಏಷ್ಯ ಯುದ್ಧದ ಪರಿಣಾಮ ಆಮದು ಸುಂಕ ಹೆಚ್ಚಿಸಿದೆ.

ನವದೆಹಲಿಯಲ್ಲಿ 10 ಗ್ರಾಂ ಚಿನ್ನ 1,500 ಏರಿಕೆಯಾಗಿ 1,56,800ಕ್ಕೆ ತಲುಪಿದೆ. ಸೋಮವಾರ 1,55,300 ರೂಪಾಯಿ ಇತ್ತು. ಒಂದು ಕೆಜೆ ಬೆಳ್ಳಿ 2 ಲಕ್ಷ 77 ಸಾವಿರಕ್ಕೆ ಏರಿಕೆಯಾಗಿದೆ. ಭಾರತದ ಹಣದುಬ್ಬರ ಹಾಗೂ ವಿದೇಶಿ ವಿನಿಮಯ ದರದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ಇದನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಜಗತ್ತಿನಲ್ಲಿ ಚಿನ್ನ ಖರೀದಿಸುವ ಅಗ್ರ ದೇಶಗಳಲ್ಲಿ ಚೀನಾದ ಬಳಿಕ ಭಾರತ 2ನೇ ಸ್ಥಾನದಲ್ಲಿದೆ.

WhatsApp Group Join Now
Telegram Group Join Now
Share This Article