Ad imageAd image

144 ಶಾಸಕರ ಬಲದೊಂದಿಗೆ ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ವಿಜಯ್

Nagesh Talawar
144 ಶಾಸಕರ ಬಲದೊಂದಿಗೆ ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ವಿಜಯ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ತಮಿಳುನಾಡು ನೂತನ ಮುಖ್ಯಮಂತ್ರಿ ಸಿ.ವಿಜಯ್ ಜೋಸೆಫ್ ಬುಧವಾರ ಸದನದಲ್ಲಿ ಬರೋಬ್ಬರಿ 144 ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ ಗೆದ್ದಿದ್ದಾರೆ. ಈ ಮೂಲಕ ಎಲ್ಲ ವಿಘ್ನಗಳನ್ನು ದಾಟಿ ಗಟ್ಟಿ ಸರ್ಕಾರ ನಡೆಸುವ ಮುನ್ಸೂಚನೆ ನೀಡಿದ್ದಾರೆ. ಎಐಎಡಿಎಂಕೆಯ ಬಂಡಾಯ ಬಣದ ಶಾಸಕರು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಇದರಿಂದಾಗಿ 144 ಶಾಸಕರ ಬೆಂಬಲ ಸಿಕ್ಕಂತಾಗಿದೆ. ತಮಿಳುನಾಡು ವಿಧಾನಸಭೆಯ ಮ್ಯಾಜಿಕ್ ನಂಬರ್ 118 ಆಗಿದೆ.

ಕಾಂಗ್ರೆಸ್, ಸಿಪಿಐ, ಸಿಪಿಐಎಂ, ವಿಸಿಕೆ, ಐಯುಎಂಎಲ್ ಈ ಮೊದಲು ಬೆಂಬಲ ನೀಡಿದವು. ಹೀಗಾಗಿ ವಿಜಯ್ ಸಿಎಂ ಆಗಿ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಟಿವಿಕೆ ಸರ್ಕಾರ ರಚನೆ ಆಗಿತ್ತು. ಇದೀಗ ಎಐಡಿಎಂಕೆ ಬಂಡಾಯ ಬಣದ ಶಾಸಕರು ಬೆಂಬಲ ನೀಡಿದ್ದರಿಂದ 144 ಸಂಖ್ಯೆ ದಾಟಿದೆ. ಸದನದಲ್ಲಿ ವಿಜಯ್ ನಿರ್ಣಯ ಮಂಡಿಸಿದರು. ಡಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು. ಉಳಿದವರು ಬೆಂಬಲ ನೀಡಿದರು. ಸಭಾಧ್ಯಕ್ಷ ಜೆ.ಸಿ.ಡಿ ಪ್ರಭಾಕರ್, ಮುಖ್ಯಮಂತ್ರಿ ವಿಜಯ್ ಬಹುಮತ ಸಾಬೀತು ಪಡೆಸಿದರು ಎಂದು ಘೋಷಿಸಿದರು.

WhatsApp Group Join Now
Telegram Group Join Now
Share This Article